ನವದೆಹಲಿ : ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ದೂರು ದಾಖಲಿಸಲಾಗಿದೆ. ಕಾರ್ಯಕ್ರಮವೊಂದಕ್ಕೆ ಆಗಮಿಸುವುದಾಗಿ ಹಣವನ್ನು ಪಡೆದು ಕಾರ್ಯಕ್ರಮಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ. 

ಸೋನಾಕ್ಷಿ ಸಿನ್ಹಾ ಸೇರಿ ಒಟ್ಟು ಐವರ ವಿರುದ್ಧ ದೂರು ದಾಖಲಾಗಿದೆ. ಸೆಪ್ಟೆಂಬರ್ 30ರಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ 37 ಲಕ್ಷ ಹಣ ಪಡೆದು ವಂಚಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ಶ್ರೀದೇವಿ ನೆಚ್ಚಿನ ಸೀರೆ ಆನ್‌ಲೈನ್‌ನಲ್ಲಿ ಹರಾಜು: ಬೆಲೆ ಕೇಳಿದ್ರೆ ಶಾಕ್!

ದೂರು ದಾಖಲಾದ ಹಿನ್ನೆಲೆಯಲ್ಲಿ ಸೋನಾಕ್ಷಿ ಸಿನ್ಹಾ, ಅಭಿಷೇಕ್ ಸಿನ್ಹಾ, ಮಾಳವಿಕಾ ಪಂಜಾಬಿ, ದುಮಿಲ್ ತಕ್ಕರ್, ಈದ್ಗರ್ ಎನ್ನುವವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೊರದಾಬಾದ್ ಡಿಎಸ್ ಪಿ ಗಜ್ರಾಜ್ ಸಿಂಗ್ ಹೇಳಿದ್ದಾರೆ. 

ಅಯ್ಯೋ ಪಾಪ..ಎಫ್‌ಐಆರ್‌ ದಾಖಲಾಗೋ ಕೆಲಸ ಏನ್‌ ಮಾಡಿದ್ಲು ಸನ್ನಿ!

ಈ ಬಗ್ಗೆ ಪ್ರತಿಕ್ರಿಯಿಸಿದ ದೂರುದಾರರು ಸೋನಾಕ್ಷಿ ಬಳಿ ಸಾಕಷ್ಟು ಬಾರಿ ಕೇಳಿಕೊಂಡರು ಅವರು ಪ್ರದರ್ಶನ ನೀಡಲು ನಿರಾಕರಿಸಿದರು. ಇದರಿಂದ ತಮಗೆ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.