ಪಾಟ್ನಾ[ಫೆ.22] ಸನ್ನಿ ಲಿಯೋನ್ ಮೇಲೆ ಎಫ್‌ಐಆರ್ ದಾಖಲಾಗಿದೆ. ಆದರೆ ಇವರು ನಕಲಿ ಸನ್ನಿ ಲಿಯೋನ್! ಬಿಹಾರದ ಸಾರ್ವಜನಿಕ ಆರೋಗ್ಯ ಇಲಾಖೆಯ ಎಂಜಿನಿಯರಿಂಗ್ ವಿಭಾಗ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ.

ಪರೀಕ್ಷೆಯನ್ನೇ ಬರೆಯದೆ ಇಂಜಿನಿಯರಿಂಗ್ ಟಾಪರ್ ಆದ ಸನ್ನಿ!

 ಬಿಹಾರ ಶಿಕ್ಷಣ ಇಲಾಖೆ ಜ್ಯೂನಿಯರ್ ಇಂಜಿನಿಯರಿಂಗ್ ಬಿಹಾರ್ ಪರೀಕ್ಷೆ ಫಲಿತಾಂಶವನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಟಾಪರ್ ಲಿಸ್ಟ್ ನಲ್ಲಿ ಸನ್ನಿ ಲಿಯೋನ್ ಹೆಸರು ಇದ್ದಿದ್ದೆ ಈ ಎಲ್ಲ ಗೊಂದಲಗಳಿಗೆ ಮೂಲ ಕಾರಣ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಾಗಿದ್ದು ಕಿಡಿಗೇಡಿಯೊಬ್ಬ/ಒಬ್ಬಳು ಸನ್ನಿ ಲಿಯೋನ್ ಪೋಟೋ ಇರುವ ಜತೆಗೆ ಹೆಸರು ಇರುವ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆದ ಮೇಲೆ ಅಸಲಿ ಕತೆ ಹೊರಬರಬೇಕಿದೆ.