ನವರಸ ನಾಯಕ ಜಗ್ಗೇಶ್ ಅವರಿಗೆ ರಾಗಿ ಮುದ್ದೆ, ಬಸ್ಸಾರು ತುಂಬಾ ಫೇವರಿಟ್; ಕ್ರೆಸೆಂಟ್ ಹೋಟೆಲ್'ನ ಆಪಂ ಮತ್ತು ಎಳೆನೀರು ಪಾಯಸ ತುಂಬಾ ಇಷ್ಟವಂತೆ.

ನವರಸ ನಟ ಜಗ್ಗೇಶ್ ಅವರು ಆಹಾರ ವಿಚಾರದಲ್ಲಿ ತುಂಬಾ ಸ್ಟ್ರೈಟ್ ಫಾರ್ವರ್ಡ್. ಇವರಿಗೆ ನಾಟಿ ಸ್ಟೈಲ್(ದೇಸೀ ಶೈಲಿ) ಆಹಾರ ಬಹಳ ಇಷ್ಟ. ಮನೆಯ ಊಟವನ್ನೇ ಹೆಚ್ಚಾಗಿ ಮಾಡುವ ಇವರು ಹೊರಗೆ ಹೋದ ಸಂದರ್ಭದಲ್ಲಿ ಮಾತ್ರ ಕೆಲವೇ ಹೋಟೆಲ್'ಗಳನ್ನು ಅವಲಂಬಿಸುತ್ತಾರಂತೆ. ಕನ್ನಡಪ್ರಭದೊಂದಿಗೆ ತಮ್ಮ ಆಹಾರಾಭ್ಯಾಸದ ಬಗ್ಗೆ ಮಾತನಾಡಿದ ಜಗ್ಗೇಶ್ ತಮ್ಮ ನೆಚ್ಚಿನ ಆಹಾರ ಮತ್ತು ಹೋಟೆಲ್'ಗಳನ್ನು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಗ್ಗೇಶ್'ಗೆ ಇಷ್ಟದ ಆಹಾರಗಳು:
1) ರಾಗಿ ಮುದ್ದೆ, ಬಸ್ಸಾರು ತುಂಬಾ ಇಷ್ಟ
2) ರಾಗಿ ಮುದ್ದೆ, ಚಿಕನ್ ಸಾರು
3) ರಾಗಿ ರೊಟ್ಟಿ, ಗಟ್ಟಿ ತೆಂಗಿನಕಾಯಿ ಚಟ್ನಿ
4) ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ
5) ಶಾವಿಗೆ ಬಾತ್
6) ಬಿಸಿಬೇಳೆ ಬಾತ್

ಇಷ್ಟದ ಹೋಟೆಲ್'ಗಳು:
1) ಲೀ ಮೆರಿಡಿಯನ್, ಸ್ಯಾಂಕಿ ಟ್ಯಾಂಕ್ ರಸ್ತೆ
2) ಜ್ಯೂವೆಲ್ ಬಾಕ್ಸ್ ಹೋಟೆಲ್(ಕೋಶಿಸ್), ಸೇಂಟ್ ಮಾರ್ಕ್ಸ್ ರಸ್ತೆ
3) ಬೆಟ್ಟಯ್ಯ ಮಿಲಿಟರಿ ಹೋಟೆಲ್, ಮಾಗಡಿ ರಸ್ತೆ, ಬಿನ್ನಿಪೇಟೆ
4) 37 ಕ್ರೆಸೆಂಟ್ ಹೋಟೆಲ್, ಕ್ರೆಸೆಂಟ್ ರಸ್ತೆ (ಇಲ್ಲಿ ಆಪಂ ಮತ್ತು ಎಳೆನೀರು ಪಾಯಸ)

ಈ ನಾಲ್ಕು ಹೋಟೆಲ್'ಗಳಲ್ಲಿ ಜಗ್ಗೇಶ್'ಗೆ ಇಷ್ಟವಾದ ಆಹಾರ ಸಿಗುತ್ತದಂತೆ. ಬೆಂಗಳೂರಿನಲ್ಲಿದ್ದಾಗ ಸಾಮಾನ್ಯವಾಗಿ ಇವರು ಈ ನಾಲ್ಕು ಹೋಟೆಲ್'ಗಳ ಊಟವನ್ನು ನೆಚ್ಚಿಕೊಳ್ಳುತ್ತಾರೆ.

(epaper.kannadaprabha.in)