ಅಮೀರ್ ಖಾನ್‌ಗೆ ಎಷ್ಟು ಹೇಳಿ ಕೊಟ್ರೂ ಇದೊಂದು ಮಾತ್ರ ಬರ್ತಾ ಇರ್ಲಿಲ್ವಂತೆ!

ಬಾಲ್ಯವನ್ನು ನೆನೆಸಿಕೊಂಡ ಅಮಿರ್ ಖಾನ್ | ಎಷ್ಟು ಹೇಳಿಕೊಟ್ರೂ ಇದೊಂದು ಮಾತ್ರ ಬರ್ತಾ ಇರಲಿಲ್ವಂತೆ | ಅಮಿರ್ ಖಾನ್ ಬಾಲ್ಯದ ಮಜವಾದ ಕಥೆಯಿದು 

Childhood pranks of famous Bollywood actor Aamir Khan

ಯಾರು ಎಷ್ಟೇ ದೊಡ್ಡವರಾದರೂ ಬಾಲ್ಯದಲ್ಲಿ ಪುಟ್ಟ ಮಕ್ಕಳೇ. ಆಗ ಎಲ್ಲರೂ ತಂಟೆಕೋರರೇ. ಎಲ್ಲರೂ ಬಾಲ್ಯದಲ್ಲಿ ಹುಡುಗಾಟ ಮಾಡಿಕೊಂಡೇ ಬೆಳೆದವರು. ನಟ ಅಮಿರ್ ಖಾನ್‌ರವರ ಬಾಲ್ಯದ ಕಥೆ ಬಹಳ ಮಜವಾಗಿದೆ. ಅದೇನು ಅಂತ ತಿಳ್ಕೋಳೋಕೆ ಇದನ್ನು ಓದಿ. 

ಬಹಳ ಚಿಕ್ಕವನಿದ್ದಾಗ ಅಮ್ಮ ಒಂದು ಸೈಕಲ್ ಕೊಡಿಸಿದ್ದರು. ನನಗೆ ಅದನ್ನು ತುಳಿಯಬೇಕು ಅಂತ ಗೊತ್ತಿತ್ತು. ಆದರೆ ಬ್ಯಾಲೆನ್ಸ್ ಮಾಡೋದು ಗೊತ್ತಿರಲಿಲ್ಲ. ಸೈಕಲ್ ಬಗ್ಗೆ ಬಹಳ ಆಕರ್ಷಣೆ. ಆದರೆ ಸೈಕಲ್ ಹೊಡೆಯಬೇಕಾದರೆ
ಜೊತೆಗೊಬ್ಬರು ಇರಬೇಕು. ನಾನು ಸೈಕಲ್ ತುಳಿಯುತ್ತಿದ್ದರೆ ಅವರು ಸೈಕಲ್ ಹಿಡಿದುಕೊಂಡು ನನ್ನ ಜೊತೆಗೇ ಓಡಬೇಕು.

ಕಂತ್ರಿ ನಾಯಿಯೋ, ಜಾತಿ ನಾಯಿಯೋ ತಿಳಿಯುವುದು ಹೇಗೆ? ತೇಜಸ್ವಿ ಹೇಳ್ತಾರೆ ನೋಡಿ

ಅವರೆಷ್ಟು ಸೈಕಲ್ ಹಿಡಿದು ಕಲಿಸಿದರೂ ನನಗೆ ಬ್ಯಾಲೆನ್ಸ್ ಮಾಡೋದು ಗೊತ್ತಾಗುತ್ತಿರಲಿಲ್ಲ. ಒಮ್ಮೊಮ್ಮೆ ಕೈ ಬಿಡುತ್ತಿದ್ದರು. ಆದರೆ ನಾನು ಭಾರಿ ಕೇರ್‌ಫುಲ್ ಆಗಿರುತ್ತಿದ್ದೆ. ಅವರು ಕೈಬಿಟ್ಟಿದ್ದು ಗೊತ್ತಾದ ಕೂಡಲೇ ನನಗೆ ಬ್ಯಾಲೆನ್ಸ್ ತಪ್ಪುತ್ತಿತ್ತು, ಹೆದರಿಕೆಯಾಗಿ ಬಿದ್ದು ಬಿಡ್ತಿದ್ದೆ.

ಮಕ್ಕಳ ದಿನಾಚರಣೆ; ಫ್ಯಾನ್ಸಿ ಡ್ರೆಸ್‌ನಲ್ಲಿ ಕಂಗೊಳಿಸುತ್ತಿದ್ದಾರೆ ಮುದ್ದು ಮಕ್ಕಳು

ಕೊನೆ ಕೊನೆಗೆ ಅದು ಎಲ್ಲಿಯವರೆಗೆ ಹೋಯಿತೆಂದರೆ ನನಗೆ ಗೊತ್ತಾಗದ ಹಾಗೆ ಸೈಕಲ್‌ನಿಂದ ಕೈ ಬಿಟ್ಟರೆ ಮಾತ್ರ ಬ್ಯಾಲೆನ್ಸಿಂಗ್ ಮಾಡೋದು ಅನ್ನುವಲ್ಲಿಯವರೆಗೆ. ಎಷ್ಟೋ ದಿನದ ಈ ಸರ್ಕಸ್ ಬಳಿಕ ಸೈಕಲ್ ಬ್ಯಾಲೆನ್ಸಿಂಗ್ ಗೊತ್ತಾಯ್ತು. ಆ ಹಂತಕ್ಕೆ ಬರಲು ಅದೆಷ್ಟು ಬಾರಿ ಸೈಕಲ್‌ನಿಂದ ಬಿದ್ದಿದ್ದೆನೋ, ಈಗ  ನೆನೆಸಿದರೆ ನಗು ಬರುತ್ತೆ.  

- ಅಮಿರ್ ಖಾನ್, ಬಾಲಿವುಡ್ ನಟ 

Latest Videos
Follow Us:
Download App:
  • android
  • ios