ಮೂಗುತಿ ಹೆಣ್ಣು ಮಕ್ಕಳ ಸೌಂದರ್ಯ ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಮೈ ನೆರೆದಾಗ ಮೂಗುತಿ ಧರಿಸುವುದು ಕಡ್ಡಾಯವಾಗಿತ್ತು. ಕಾಲ ಬದಲಾದಂತೆ ಈ ಮೂಗುತಿಯ ಟ್ರೆಂಡ್ ಬದಲಾಗುತ್ತಿದ್ದು, ಕಾಲಕ್ಕೆ ತಕ್ಕಂತೆ ಮೂಗುಬೊಟ್ಟನ್ನು ಹಾಕಿ ಕೊಳ್ಳುವ ರೀತಿಯೂ ಬದಲಾಗುತ್ತಿದೆ. 

ಉಡುಪಿಗೆ ತಕ್ಕಂತೆ ಈಗೀಗ ನಟಿ ಮಣಿಯರು ಧರಿಸುತ್ತಿರುವ ಮೂಗುತಿ ಅವರ ಸೌಂದರ್ಯವನ್ನು ಹೆಚ್ಚಿಸಿರುವುದು ಸುಳ್ಳಲ್ಲ. ಚಿನ್ನ, ವಜ್ರದಲ್ಲಿ ಮಾತ್ರವಲ್ಲ. ಆಕ್ಸಿಡೈಸಡ್ ಬೆಳ್ಳಿಯಿಂದ ಹಿಡಿದು ವಿವಿಧ ಲೋಹಗಳಲ್ಲಿಯೂ ಈ ಮೂಗು ಬೊಟ್ಟು ವಿವಿಧ ನಮೂನೆಯಲ್ಲಿ ಲಭ್ಯ. ಒಟ್ಟಿನಲ್ಲಿ ಅಂದವನ್ನು ಹೆಚ್ಚಿಸುವ ಈ ಮೂಗು ಬೊಟ್ಟಿನ ಮೇಲೆ ಸಿನಿಮಾ ತಾರೆಯರಿಗೆ ಲವ್ ಆಗಿರುವುದು ಸುಳ್ಳಲ್ಲ... ಮೂಗುತಿಯಿಂದಲೇ ಮತ್ತಷ್ಟು ಸೌಂದರ್ಯ ಹೆಚ್ಚಿಸಿಕೊಂಡ ಕನ್ನಡ ನಟಿಯರು ಇವರು.

ಶ್ರದ್ಧಾ ಶ್ರೀನಾಥ್

ಶೃತಿ ಹರಿಹರನ್

ಹಿತಾ ಚಂದ್ರಶೇಖರ್

ಕಿರುತೆರೆಯ ಗೊಂಬೆ ಖ್ಯಾತಿಯ ನೇಹಾ ಗೌಡ

ಸುಜಾತ ಸತ್ಯನಾರಾಯಣ್

ಅನುಪಮಾ ಗೌಡ

ರಚಿತಾ ರಾಮ್