ಅನ್ನ ತಿಂದುಕೊಂಡು ಸುಳ್ಳು ಹೇಳಬೇಕಾದ ಅವಶ್ಯಕತೆ ನನಗಿಲ್ಲ. ಭಗವಂತ ಶಕ್ತಿ ಕೊಟ್ಟಿದ್ದಾನೆ, ಇನ್ನೂ ಹೊಸ ಹುಡುಗರನ್ನು ಬೆಳೆಸಬೇಕಿದೆ ನಾನು. ನಿಯತ್ತಾಗಿರೋ ಹೊಸ ಹುಡುಗರನ್ನು ಬೆಳೆಸಬೇಕಿದೆ. ಆ ಥರ ಪ್ರಶ್ನೆಗಳಿಗೆ ನಾನು ಉತ್ರ ಕೊಟ್ಕೋತೀನಿ. ಧನಂಜಯ್‌ನನ್ನು 2 ವರ್ಷ ದುಡಿಸಿದೆ, ಜಿಮ್‌ ಮಾಡಿಸ್ದೆ, ಟ್ರೈನ್‌ ಮಾಡಿದೆ'. 

ಗುರುಪ್ರಸಾದ್

‘ಆತ ಒಬ್ಬ ಗುರುದ್ರೋಹಿ. ನಾನು ಅವನ ಬಗ್ಗೆ ಮಾತಾಡೋಕ್ಕೆ ಇಷ್ಟಪಡಲ್ಲ. ನನ್ನ ಬಗ್ಗೆ ಅವನು ಏನೇನೋ ಹೇಳಿಕೊಳ್ಳುತ್ತಿದ್ದಾನೆ. ನಾನೇ ಕರೆದುಕೊಂಡು ಬಂದ ಹುಡುಗ. ಈ ಚಿತ್ರ ಧನಂಜಯ್‌ ಚಿತ್ರ ಅಲ್ಲ, ಆತ ಒಬ್ಬ ಪೇಯ್ಡ್‌ ಆರ್ಟಿಸ್ಟ್‌ ಅಷ್ಟೇ. ಆತನ ಚಿತ್ರ ಅಂತಲೇ ಸಾಕಷ್ಟುಜನ ಬಂದಿಲ್ಲ. ರಾಟೆ ಚಿತ್ರ ಬಿದ್ದು ಹೋಯ್ತು. ಬದ್ಮಾಷ್‌ ಬಿದ್ದು ಹೋಯ್ತು, ಡೈರೆಕ್ಟರ್‌ ಸ್ಪೆಷಲ್‌ ಮಾತ್ರವೇ ಕಲೆಕ್ಷನ್‌ ತೋರಿಸೋ ರಿಪೋರ್ಟು ಆತನದ್ದು. ಡೈರೆಕ್ಟರ್‌ ಪ್ರಸಾದ್‌ ಹಾಕಿರೋ ದುಡ್ಡನ್ನು ವಾಪಾಸ್‌ ಕೊಟ್ಟಿರೋದು ಗುರುಪ್ರಸಾದ್‌ನಿಂದಾಗಿ ಮಾತ್ರ. ಎಲ್ಲಾ ನಿರ್ಮಾಪಕರ ಜೊತೆ ಮಾತಾಡಿದ್ದೀನಿ, ಆತ ಇದುವರೆಗೂ ನಿರ್ಮಾಪಕರನ್ನ ಸೇಫ್‌ ಮಾಡಿಲ್ಲ. ಇವತ್ತು ನನ್ನ ಬಗ್ಗೆ ಆಚೆ ಕಡೆ ಮಾತಾಡುತ್ತಿದ್ದಾನೆ ಆತ. ಆತನಿಗೆ ಗುರುದ್ರೋಹಿ ಅಂತ ಧಿಕ್ಕಾರ ಕೂಗೋಕ್ಕಾದರೂ ಥೇಟರ್‌ಗೆ ಬನ್ನಿ.
ಅನ್ನ ತಿಂದುಕೊಂಡು ಸುಳ್ಳು ಹೇಳಬೇಕಾದ ಅವಶ್ಯಕತೆ ನನಗಿಲ್ಲ. ಭಗವಂತ ಶಕ್ತಿ ಕೊಟ್ಟಿದ್ದಾನೆ, ಇನ್ನೂ ಹೊಸ ಹುಡುಗರನ್ನು ಬೆಳೆಸಬೇಕಿದೆ ನಾನು. ನಿಯತ್ತಾಗಿರೋ ಹೊಸ ಹುಡುಗರನ್ನು ಬೆಳೆಸಬೇಕಿದೆ. ಆ ಥರ ಪ್ರಶ್ನೆಗಳಿಗೆ ನಾನು ಉತ್ರ ಕೊಟ್ಕೋತೀನಿ. ಧನಂಜಯ್‌ನನ್ನು 2 ವರ್ಷ ದುಡಿಸಿದೆ, ಜಿಮ್‌ ಮಾಡಿಸ್ದೆ, ಟ್ರೈನ್‌ ಮಾಡಿದೆ'. 

ಧನಂಜಯ್

‘ಗುರುಪ್ರಸಾದ್‌, ಯಾರ್ಯಾರಿಗೆ ಎಷ್ಟೆಷ್ಟುಗೌರವ ಕೊಡಬೇಕು ಅಂತ ತುಂಬ ಚೆನ್ನಾಗಿ ಕಲಿತುಕೊಂಡಿದ್ದೇನೆ. ನಾನು ಕೇಳಿದ್ದೊಂದೇ, ಸಿನಿಮಾ ಪ್ರಮೋಶನ್‌ಗೆ ಬನ್ನಿ ಅಂತ. ಸಿನಿಮಾ ನಮಗಿಂತ ದೊಡ್ಡದು, ನಮ್ಮ ಈಗೋಗಳನ್ನು ಬಿಟ್ಟು ಬನ್ನಿ ಅಂತ ಮಾತ್ರ ಕೇಳಿರೋದು ನಾನು. ನೀವು ಪ್ರಚಾರಕ್ಕೆ ಹೋಗಬೇಡಿ ಅಂತ ಹೇಳಿದ್ರಿ, ಆದರೆ ನಾನು ನಟನಾಗಿ ಸಿನಿಮಾ ಪ್ರಚಾರಕ್ಕೆ ಹೋಗೋದು ನನ್ನ ಕರ್ತವ್ಯ. ಅದಕ್ಕೆ ಹೋದೆ. ಅಷ್ಟಕ್ಕೇ ಇಷ್ಟೆಲ್ಲಾ ಮಾತಾಡೋ ಅವಶ್ಯಕತೆ ಇಲ್ಲ. ಮತ್ತೊಂದು ಮಾತು ಹೇಳಿದ್ರಿ, ನನಗೆ ನಟನೆ ಕಲಿಸಿಕೊಟ್ಟಿದ್ದು ನೀವೇ, ನಾನೇ ಜೀವ ಕೊಟ್ಟಿದ್ದು ಅಂತ. ಆದರೆ ಖಂಡಿತ ಹೇಳ್ತೀನಿ, ನಾನು ತುಂಬ ಚಿಕ್ಕೋನಾಗಿದ್ದಾಗಿಂದಾನೇ ನಟನೆ ಮಾಡುತ್ತಾ ಬಂದಿದ್ದೀನಿ. ನಮ್ಮ ತಂದೆ ನಟರು. ಪ್ರೊಫೆಷನಲ್‌ ಆಗಿ ನನಗೆ ನಟನೆ ಹೇಳಿಕೊಟ್ಟಿದ್ದು ರಂಗಭೂಮಿಯ ಮೈಮ್‌ ರಮೇಶ್‌. ಗುರುಪ್ರಸಾದ್‌ ಅವರು ನನ್ನ ಕರೆದು ಅವಕಾಶ ಕೊಟ್ಟರು. ಆದರೆ ನಟಿಸುವ ಮುಂಚೆ ಗುರುಪ್ರಸಾದ್‌ ಅವರ ಜೊತೆ ಏನೂ ನಿರೀಕ್ಷೆ ಇಲ್ಲದೇ ಕೆಲಸ ಮಾಡಿದ್ದೀನಿ, ಸೈಕಲ್‌ ಹೊಡೆದಿದ್ದೀನಿ. ಈಗ ಬೇಡ, ತುಂಬ ವಿಚಾರಗಳನ್ನು ಮಾತಾಡೋಕ್ಕೆ ಹೋದರೆ ತುಂಬ ತಪ್ಪಾಗತ್ತೆ. ದೊಡ್ಡೋರು ನೀವು, ತುಂಬ ಒಳ್ಳೆ ಮಾತುಗಾರರು. ಆದರೆ ನಾನು ಕೊಡೋ ಗೌರವ ಉಳಿಸಿಕೊಳ್ಳುವ ಯೋಗ್ಯತೆ ನಿಮಗೆ ಇರಲಿ. ನನ್ನ ಪ್ರಾಮಾಣಿಕತೆಗೆ ಇಷ್ಟುಒಳ್ಳೆ ಬೆಲೆ ಕೊಟ್ಟಿದ್ದು ತುಂಬ ಖುಷಿ ಆಯ್ತು'.

ಧನಂಜಯ್ ‌ ನಂಬಿರುವ ಯಾವ ನಿರ್ಮಾಪಕರಿಗೂ ಒಳ್ಳೆಯದಾಗಲ್ಲ ಅಂತ ಹೇಳಿದ್ದೀರಿ. ನಾನೊಬ್ಬ ನಟ ಸರ್‌. ಯಾವುದನ್ನೂ ಹುಡುಕಿಕೊಂಡು ಹೋಗಿಲ್ಲ. ಯಾರು ಅವಕಾಶ ಕೊಡುತ್ತಾರೋ ಅವರ ಹತ್ತಿರ ಹಾನೆಸ್ಟಾಗಿ ಕೆಲಸ ಮಾಡಿ ಬಂದಿದ್ದೀನಿ. ನನ್ನ ಪ್ರತಿಭೆ ನೋಡಿಯೇ ನೀವು ನಂಗೆ ಅವಕಾಶ ಕೊಟ್ಟಿದ್ದು. ಆದರೆ ನಿಮ್ಮ ನಿರ್ಮಾಪಕರೆಲ್ಲಾ ಎಷ್ಟುಒದ್ದಾಡಿದ್ದಾರೆ ಅಂತ ನಾನು ನೋಡಿದ್ದೇನೆ. ಡೈರೆಕ್ಟರ್‌ ಸ್ಪೆಷಲ್‌ ನಿರ್ಮಾಪಕರು ನಿಮ್ಮಿಂದಾಗಿ ಕಷ್ಟಪಟ್ಟಿದ್ದಾರೆ. ಅವರು ನನ್ನನ್ನು ನಂಬಿ ಹಾಕಿದ್ದಲ್ಲ. ನಿಮ್ಮನ್ನು ನೋಡಿ ದುಡ್ಡು ಹಾಕಿದ್ದು. ಎರಡನೇ ಸಲ ನಿರ್ಮಾಕರಿಗೂ ಅದೇ ಥರ ಮಾಡಿದ್ರಿ. ಅದಕ್ಕಿಂತ ಮೊದಲು ಸಿಕ್ಕ ನಿರ್ಮಾಪಕರಿಗೂ ತೊಂದರೆ ಕೊಟ್ಟಿದ್ದೀರಿ.

(ಕನ್ನಡಪ್ರಭ ವಾರ್ತೆ)

--