ಅಭಿಮಾನಿಗಳಿಗೆ ಮಾದರಿಯಾಗಲು ಹೊರಟ ತಾಪ್ಸಿ

Everything not yet fair, square for outsiders in Bollywood Says Taapsee Pannu
Highlights

ನಾವು ನಮ್ಮ ನಮ್ಮ ವ್ಯಾಪ್ತಿಯಲ್ಲಿ ಬದ್ಧತೆ ತೋರಿಸಿದರೆ ಸುಂದರವಾದ ಬಾಲಿವುಡ್ ಕಟ್ಟಬಹುದು. ನಮ್ಮನ್ನು ಇಷ್ಟಪಡುವ ಅಭಿಮಾನಿಗಳಿಗೆ ಮಾದರಿಯಾಗಬಹುದು.

ಬೆಂಗಳೂರು[ಜೂ.15]: ನಾವು ನಮ್ಮ ನಮ್ಮ ವ್ಯಾಪ್ತಿಯಲ್ಲಿ ಬದ್ಧತೆ ತೋರಿಸಿದರೆ ಸುಂದರವಾದ ಬಾಲಿವುಡ್ ಕಟ್ಟಬಹುದು. ನಮ್ಮನ್ನು ಇಷ್ಟಪಡುವ ಅಭಿಮಾನಿಗಳಿಗೆ ಮಾದರಿಯಾಗಬಹುದು. ತಾವು ತೊಡಗಿಸಿಕೊಂಡಿರುವ ಕ್ಷೇತ್ರದ ಸಮಸ್ಯೆಗಳನ್ನು ತೆರೆದಿಡುವ ಸಾಹಸ ಮಾಡುವುದು ಕೆಲವೇ ಕೆಲವು ಮಂದಿಗೆ ಮಾತ್ರ ಸಾಧ್ಯ. ಈಗ ಅಂತಹ ಸಾಹಸ ಮಾಡಿದ್ದಾರೆ ತಾಪ್ಸಿ ಪನ್ನು.

ನಾನಿನ್ನೂ ಬಾಲಿವುಡ್‌ನಲ್ಲಿ ಬೆಳೆಯುತ್ತಿರುವ ಸಣ್ಣ ಗಿಡ ಎನ್ನುವುದು ಗೊತ್ತಿದೆ. ಆದರೆ ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನಾನು ನನ್ನ ಕೆಲಸದಲ್ಲಿ ಸಾವಿರ ಪಾಲು ಗುಣಮಟ್ಟ ಸಿಕ್ಕಬೇಕು ಎನ್ನುವ ನಿಟ್ಟಿನಲ್ಲಿಯೇ ಯಾವಾಗಲೂ ಚಿಂತಿಸುತ್ತೇನೆ. ಬಾಲಿವುಡ್ ಎನ್ನುವ ಜಗತ್ತನ್ನು ಹೊರಗಿನಿಂದ ನೋಡಿದಾಗ ಎಲ್ಲವೂ ಸುಂದರವಾಗಿಯೇ ಇದೆ ಎನ್ನಿಸುತ್ತದೆ. ಆದರೆ ಹತ್ತಿರಕ್ಕೆ ಹೋದಾಗಲೇ ಹುಳುಕು ಗೊತ್ತಾಗುವುದು. ಆದರೆ ನಾವು ನಮ್ಮ ನಮ್ಮ ವ್ಯಾಪ್ತಿಯಲ್ಲಿ ಬದ್ಧತೆ ತೋರಿಸಿದರೆ ಸುಂದರವಾದ ಬಾಲಿವುಡ್ ಕಟ್ಟಬಹುದು. 

ನಮ್ಮನ್ನು ಇಷ್ಟಪಡುವ ಅಭಿಮಾನಿಗಳಿಗೆ ಮಾದರಿಯಾಗಬಹುದು’ ಎಂದು ‘ವಿಷ್ಯದ ಬಾಲಿವುಡ್ ಕನಸು ಬಿಚ್ಚಿಟ್ಟಿದ್ದಾರೆ ತಾಪ್ಸಿ. ಅಂದ ಹಾಗೆ ತಾಪ್ಸಿಗೆ ಇದ್ದಕ್ಕಿದ್ದಂತೆ ಈ ರೀತಿಯ ಅಭಿಪ್ರಾಯ ಬರಲು ಕಾರಣವೇನು? ಬಾಲಿವುಡ್‌ನಲ್ಲಿ ತಾಪ್ಸಿ ಕಂಡ ಕಹಿ ಅನುಭವವಾದರೂ ಏನು ಎನ್ನುವುದು ಈಗ ಹೆಚ್ಚಿನ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ. ಅಲ್ಲದೇ ತಾಪ್ಸಿ ಕೆಲಸದಲ್ಲಿ ತೋರುವ ಬದ್ಧತೆ, ಈ ರೀತಿಯ ಬೋಲ್ಡ್ ಕ್ಯಾರೆಕ್ಟರ್ ಈಗಾಗಲೇ ಬಹಳಷ್ಟು ಅಭಿಮಾನಿಗಳಿಗೆ ಮಾದರಿಯಾಗಿದೆ.

loader