ಮನೆಯವರೊಂದಿಗೆ ಸಂಪರ್ಕವಿಲ್ಲದೆ 79 ದಿನಗಳನ್ನು ಕಳೆದ ಬಿಗ್‌ಬಾಸ್ ಮಂದಿಗೆ ವೀಕೆಂಡ್ ಫುಲ್ ಹ್ಯಾಪಿ ಹ್ಯಾಪಿ....ಪ್ರತಿಯೊಬ್ಬ ಸ್ಪರ್ಧಿಯೂ ಮನೆಯಿಂದ ಒಬ್ಬರು ಬಂದು ಯಾವುದಾದರೂ ಚಟುವಟಿಕೆ ಮಾಡಿಸಿಯೇ ಮರಳುತ್ತಾರೆ. ದಿನ ಆರಂಭವಾಗುತ್ತಿದ್ದಂತೆ ಮನೆಗೆ ಬಂದ ಮೊದಲ ವ್ಯಕ್ತಿ ನವೀನ್ ಸಜ್ಜು ತಾಯಿ. ಸಂಜೆ ಶಶಿ ಅವರ ಭಾವ ಹಾಗೂ ಅವರ ಮಗ. ಇನ್ನೂ ರಾತ್ರಿ ಬಂದವರು ಅಕ್ಷತಾ ತಾಯಿ.

ಬಿಗ್‌ಬಾಸ್ ಮನೆಗೆ ಕಾಲಿಟ್ಟಂತೆ ಕ್ಲೋಸ್ ಆಗಿ ಆತ್ಮೀಯ ಗೆಳೆತನ ಬೆಳೆಸಿಕೊಂಡವರು ಅಕ್ಷತಾ ಹಾಗೂ ಎಂ.ಜೆ ರಾಕೇಶ್. ಆದರೆ ಇದು ಅಕ್ಷತಾ ತಾಯಿಗೆ ಇಷ್ಟವಾಗಲಿಲ್ವಾ? ಹಾಗಾದ್ರೆ ಅಕ್ಷತಾ ತಾಯಿ ಬಳಿ ರಾಕೇಶ್ ಕ್ಷೇಮೆ ಕೇಳಿದ್ದಾರೂ ಯಾಕೆ? ಇಲ್ಲಿದೆ ನೋಡಿ.

ಅಕ್ಷತಾ ಅಮ್ಮ ಎಂಟ್ರಿ ಹೇಗಿತ್ತು ಗೊತ್ತಾ?

ಮನೆಗೆ ಅಕ್ಷತಾ ತಾಯಿ ಎಂಟ್ರಿ ಕೊಟ್ಟ ರೀತಿಯೇ ಡಿಫರೆಂಟ್. ಮೊದಲು ಕನ್ಫೆಷನ್ ರೂಂನಲ್ಲಿ ಕೂತಿದ್ದು, ಟಿವಿಯಲ್ಲಿ ಕಾಣಿಸಿಕೊಂಡರು. ಅದನ್ನು ಮೊದಲು ನೋಡಿದವರೇ ಧನ್‌ರಾಜ್. ನಂತರ ಕನ್ಫೆಷನ್ ರೂಮ್‌ಗೆ ಹೋಗಿ ನೋಡಿದರೆ, ಅವರ ತಾಯಿ ಮುಖ್ಯ ದ್ವಾರದಿಂದ ಬಂದರು.

ಎಲ್ಲರೊಂದಿಗೂ ಹೆಚ್ಚು ಆತ್ಮೀಯತೆಯಿಂದ ಮಾತಾಡಿಸಿಕೊಂಡಿದ್ದ ಅಕ್ಷತಾ ಅಮ್ಮ, ರಾಕೇಶ್ ಬಳಿ ಹೋಗದೆ ದೂರವಿದ್ದರು. ಇದನ್ನು ಗಮನಿಸಿದ ಅಕ್ಷತಾ, ರಾಕೇಶ್‌ನನ್ನು ಮಾತಾಡಿಸುವಂತೆ ತಾಯಿ ಬಳಿ ಬೇಡಿಕೊಂಡರು. ಆದರೆ, ಇದಕ್ಕೆ ಅವರು ಒಪ್ಪಿಕೊಳ್ಳದೆ ದೂರ ಕುಳಿತಿದ್ದರು. ಅಷ್ಟೇ ಅಲ್ಲದೇ ಅವನಿಂದ ದೂರ ಇರು ಎಂದು ಸೂಕ್ಷ್ಮವಾಗಿಯೇ ಹೇಳಿದರು.

ರಾಕೇಶ್‌ಗೆ ಅಕ್ಷತಾ ತಾಯಿ ಕಿವಿಮಾತು: ಕೆಲವು ನಿಮಿಷ ಇದನ್ನು ಗಮನಿಸಿದ ರಾಕೇಶ್, ತಾನಾಗಿಯೆ ಅಕ್ಷತಾ ತಾಯಿ ಬಳಿ ಬಂದು ‘ನನ್ನ ಮೇಲೆ ಕೋಪನಾ?’ ಎಂದು ಕೇಳುತ್ತಾರೆ. ಅದಕ್ಕೆ ಅಕ್ಷತಾ ಅಮ್ಮಾ ‘ಹಾಗೇನೂ ಇಲ್ಲಪ್ಪಾ, ಹೊರಗಡೆ ಜನರು ಸುಮ್ಮನೆ ಏನೋ ಮಾತನಾಡುತ್ತಾರೆ, ನೀನು ನನ್ನ ಮಗನ ತರಾನೇ...’ ಎಂದು ಹೇಳಿ ಸುಮ್ಮನಾದರು.

ನಂತರ 'ಎಲ್ಲರನ್ನೂ ಮನೆಗೆ ಕರೆದು ಕೊಂಡು ಬಾ. ನಾನು ಮಟನ್ ಸಾಂಬರ್, ಇಡ್ಲಿ ಮಾಡುತ್ತೇನೆ...' ಎಂದರು. ಆದರೆ ಮನೆಯಿಂದ ಹೊರ ಹೋಗುವ ಮುನ್ನ ಬಿಗ್‌ಬಾಸ್ ಮನೆಯಲ್ಲಿ ಮಟನ್ ಬಳಸಿ ಅಡುಗೆ ಮಾಡುವಂತೆ ಅಕ್ಷತಾ ಅಮ್ಮನಿಗೆ ಟಾಸ್ಕ್ ನೀಡುತ್ತಾರೆ.