ಬಿಗ್ ಬಾಸ್‌ನ ಮನೆಯಿಂದ 5ನೇ ವಾರದ ಎಲಿಮಿನೇಶನ್ ಆಗಿದೆ. ಮನೆಯಿಂದ ಬಾಡಿ ಬಿಲ್ಡರ್ ರವಿ ಹೊರಬಿದ್ದಿದ್ದಾರೆ.

ಮೊದನಲೇ ವಾರ ಮನೆಯ ನಾಯಕರಾಗಿ ಎಲ್ಲರಲ್ಲೂ ಶಿಸ್ತು ಮೂಡಿಸಲು ಮುಂದಾಗಿದ್ದ ರವಿ ನಂತರದ ದಿನಗಳಲ್ಲಿ ಆಟದಿಂದ ಮರೆಯಾದರು ಎಂದೇ ಹೇಳಲಾಗಿತ್ತು. ಮನೆಯವರಿಂದ ಹೇರ್ ಕಟಿಂಗ್ ಗೆ ಒಳಗಾಗಿದ್ದ ರವಿ ಮನೆಯಿಂದ ಹೊರ ನಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರತಿದಿನ ಬೆಳಗ್ಗೆ ಮನೆಯವರೆಲ್ಲರಿಗೂ ವ್ಯಾಐಆಮದ ಪಾಠ ಹೇಳಿಕೊಡುತ್ತಿದ್ದ ರವಿ ಕಳೆದ ವಾರ ಸೋನು ಪಾಟೀಲ್ ಅವರ ಜತೆಯಲ್ಲಿನ ಚರ್ಚೆಯಲ್ಲಿ ನಾಮಿನೇಟ್ ಆಗಿದ್ದರು. ಖುಷಿಯಿಂದಲೇ ಮನೆಯಿಂದ ಹೊರ ನಡೆದಿರುವ ರವಿ ಬಾಡಿ ಬಿಲ್ಡಿಂಗ್ ಬಗ್ಗೆ ಮಾತನಾಡಿದರು. ಬಾಡಿ ಬಿಲ್ಡಿಂಗ್ ಮಾಡುವುದಕ್ಕೆ ಕೃತಕ ಆಹಾರ ಸೇವನೆ ಮಾಡಬೇಕಿಲ್ಲ. ಸರಿಯಾದ ಆಹಾರ ಕ್ರಮ, ಸಸ್ಯಹಾರದಿಂದಲೂ ಬಾಡಿ ಬಿಲ್ಡ್ ಮಾಡಲು ಸಾಧ್ಯ ಎಂದು ಹೇಳಿದರು.

ಮನೆಯವರಿಗೆ ವಂದನೆ ಹೇಳಿದ್ದಲ್ಲದೇ ಕರ್ನಾಟಕದ ಜನತೆಗೂ ರವಿ ವಂದನೆ ಸಲ್ಲಿಸಿದರು. ಶನಿವಾರದ ಕಿಚ್ಚನ ಕತೆಯಲ್ಲಿ ಕವಿತಾ ಪ್ರಕರಣ ಚರ್ಚೆಯಾಯಿತು. ಆ್ಯಂಡಿ ಮತ್ತು ಕವಿತಾ ನಡುವಿನ ಘರ್ಷಣೆಗೆ ಒಂದು ಅರ್ಥದಲ್ಲಿ ಕವಿತಾನೇ ಕಾರಣ ಎಂಬುದನ್ನು ಕಿಚ್ಚ ಮನವರಿಕೆ ಮಾಡಿಕೊಟ್ಟರು.