ಮುಂಬೈನ ವರ್ಲಿಯಲ್ಲಿರುವ ಸ್ಟರ್ಲಿಂಗ್‌ ಸೀ ಫೇಸ್‌ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ‘ಏಕ್‌ ದುಜೆ ಕಿ ಲಿಯೇ' ಚಿತ್ರದ ನಾಯಕಿ ರತಿ ಮತ್ತು ಆಕೆಯ ಪತಿ ತಮ್ಮ ನಿವಾಸದ ವಿದ್ಯುತ್‌ ಮೀಟರ್‌ ಅನ್ನು ತಿರುಚಿ ಮುಂಬೈ ವಿದ್ಯುತ್‌ ಸರಬರಾಜು ಸಂಸ್ಥೆಯ ಕಣ್ಣಿಗೆ ಮಣ್ಣೆರೆಚಿದ್ದಾರೆ. ದಂಪತಿ 2013ರಿಂದ ವಿದ್ಯುತ್‌ ಮೀಟರ್‌ ತಿರುಚಿದ್ದಾರೆ. ಅಲ್ಲದೆ, 1.70 ಲಕ್ಷಕ್ಕೂ ಹೆಚ್ಚಿನ ವಿದ್ಯುತ್‌ ಬಿಲ್‌ ಪಾವತಿ ಮಾಡಿಲ್ಲ ಎಂಬ ವಿಚಾರವನ್ನು ಬೃಹನ್ಮುಂಬೈ ವಿದ್ಯುತ್‌ ಸರಬರಾಜು ಸಂಸ್ಥೆ ಪತ್ತೆಹಚ್ಚಿದೆ.

ಮುಂಬೈ(ಜ.21): ಬಾಲಿವುಡ್‌ ನಟಿ ರತಿ ಅಗ್ನಿಹೋತ್ರಿ ಮತ್ತು ಆಕೆಯ ಪತಿ ಅನಿಲ್‌ ವಿರ್ವಾನಿ ವಿರುದ್ಧ 48.96 ಲಕ್ಷ ಮೌಲ್ಯದ ವಿದ್ಯುತ್‌ ಕಳ್ಳತನದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.