ಮುಂಬೈ (ಫೆ. 2): ಸೋನಂಕಪೂರ್ ಹಾಗೂ ಅನಿಲ್ ಕಪೂರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ’ಏಕ್ ಲಡ್ಕಿ ಕೋ ದೇಖಾ ತೋ ಐಸಾ ಲಗಾ’ ಸಿನಿಮಾ ಆನ್ ಲೈನ್ ನಲ್ಲಿ ಲೀಕಾಗಿದೆ ಎನ್ನಲಾಗುತ್ತಿದೆ. 

ತಮಿಳ್ ರಾಕರ್ಸ್ ಎನ್ನುವ ಖಾಸಗಿ ಸೈಟ್ ಒಂದರಲ್ಲಿ ಈ ಸಿನಿಮಾ ಲೀಕ್ ಆಗಿದೆ ಎನ್ನಲಾಗಿದೆ.  ಈ ಸೈಟ್ ನಲ್ಲಿ ಮನಿಕರ್ಣಿಕಾ, ಉರಿ: ದಿ ಸರ್ಜಿಕಲ್ ಸ್ಟ್ರೈಕ್, ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್, ಜೀರೋ ಸಿನಿಮಾವನ್ನು ಲೀಕ್ ಮಾಡಲಾಗಿತ್ತು. ಆದರೂ ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. 

ಸೋನಂ ಕಪೂರ್, ಅನಿಲ್ ಕಪೂರ್, ರಾಜ್ ಕುಮಾರ್ ರಾವ್, ಜೂಹಿ ಚಾವ್ಲಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.