Asianet Suvarna News Asianet Suvarna News

ಗ್ರೀನ್ ಪೀಸ್ ಬೆಂಗಳೂರು ಕಚೇರಿ ಮೇಲೆ ಇಡಿ ದಾಳಿ!

ದೇಶಿ ಕಂಪನಿಯಿಂದ ಕೋಟಿ ಕೋಟಿ ರೂಪಾಯಿ ದೇಣಿಕೆ ಸ್ವೀಕಾರ ಹಾಗೂ ಬ್ರಿಟೀಷ್ ಪ್ರಜೆಯನ್ನ ನಿರ್ದೇಶಕರಾಗಿ ನೇಮಿಸಿ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘಿಸಿದ ಗ್ರೀನ್ ಬೆಂಗಲೂರು ಕಚೇರಿ ಮೇಲೆ ಇಡಿ ದಾಳಿ ನಡೆಸಿದೆ. ಇಲ್ಲಿದೆ ದಾಳಿ ಕುರಿತ ಸಂಪೂರ್ಣ ವಿವರ.

ED raid to Green piece bengaluru for FEMA Violation
Author
Bengaluru, First Published Oct 12, 2018, 9:09 AM IST

ನವದೆಹಲಿ(ಅ.12): ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ) ಉಲ್ಲಂಘನೆ ಸಂಬಂಧ ಪರಿಸರ ರಕ್ಷಣೆಯ ಗ್ರೀನ್ ಪೀಸ್ ಎನ್‌ಜಿಒನ ಬೆಂಗಳೂರು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ) ದಾಳಿ ಮಾಡಿದೆ. ಅಲ್ಲದೆ, ಗ್ರೀನ್‌ಪೀಸ್‌ಗೆ ಸಂಬಂಧಿಸಿದ ಸುಮಾರು ₹11.61 ಕೋಟಿ ಠೇವಣಿಯಿದ್ದ 14 ಬ್ಯಾಂಕ್ ಖಾತೆಗಳನ್ನು ಇ.ಡಿ.
ಮುಟ್ಟುಗೋಲು ಹಾಕಿಕೊಂಡಿದೆ.

ಆದರೆ, ‘ಇ.ಡಿಯ ಈ ಕ್ರಮವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ವಿರೋಧ ಧ್ವನಿಯನ್ನು ಹುಟ್ಟಡಗಿಸುವ ಯತ್ನವಾಗಿದೆ. ಫೆಮಾ ಕಾಯ್ದೆ ಉಲ್ಲಂಘಿಸಲಾಗಿದೆ ಎಂಬ ಆರೋಪ ಸುಳ್ಳು’ ಎಂದು ಗ್ರೀನ್‌ಪೀಸ್ ಹೇಳಿದೆ. ‘ಫೆಮಾ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಡಿಡಿಐಐಪಿಎಲ್ ಮತ್ತು ಗ್ರೀನ್‌ಪೀಸ್ ಇಂಡಿಯಾ ಸೊಸೈಟಿ ಮೇಲೆ ಅ.5ರಂದು ದಾಳಿ ನಡೆಸಲಾಗಿದೆ. 

ಗ್ರೀನ್‌ಪೀಸ್‌ನ ಕಾರ್ಯಚಟುವಟಿಕೆ ಕೈಗೊಳ್ಳಲು ಡಿಡಿಐಐಪಿಎಲ್ ಎಂಬ ಕಂಪನಿಯನ್ನು ಸ್ಥಾಪಿಸಲಾಗಿತ್ತು. ನೆದರ್‌ಲೆಂಡ್‌ನಲ್ಲಿರುವ ಸಂಸ್ಥೆಯೊಂದರಿಂದ ಡಿಡಿಐಐಪಿಎಲ್ ₹99 ಲಕ್ಷ ಪಡೆದಿದೆ. ಇನ್ನೊಂದು ಕಂಪನಿಯಿಂದ ₹15 ಕೋಟಿ ಪಡೆದಿದೆ. ಒಟ್ಟಾರೆ ಡಿಡಿಐಐಪಿಎಲ್ ಸಹ ₹26 ಕೋಟಿ ದೇಣಿಗೆ ಸ್ವೀಕರಿಸಿದೆ. 

ಅಲ್ಲದೆ, ಬ್ರಿಟಿಷ್ ಪ್ರಜೆಯೊಬ್ಬರನ್ನು ಡಿಡಿಪಿಐಐ ಎಲ್‌ನ ನಿರ್ದೇಶಕರನ್ನಾಗಿ ಮಾಡಲಾಗಿದೆ’ ಎಂದು ಇ.ಡಿ ಆರೋಪಿಸಿದೆ. ವಿದೇಶಿ ದೇಣಿಗೆ ನಿಯಮ ಉಲ್ಲಂಘನೆ
ಆರೋಪ ಹಿನ್ನೆಲೆ ೨೦೧೬ರಲ್ಲಿ ಗ್ರೀನ್ ಪೀಸ್‌ಗೆ ಹರಿದುಬರುವ ವಿದೇಶಿ ದೇಣಿಗೆಗೆ ಕೇಂದ್ರ ಸರ್ಕಾರ ತಡೆ ಒಡಿತ್ತು.

Follow Us:
Download App:
  • android
  • ios