ಪುನೀತ್-ಶಿವಣ್ಣ ಒಟ್ಟಿಗೆ ತೆರೆ ಮೇಲೆ?

First Published 23, Jun 2018, 1:35 PM IST
Duniya Soori to bring Shiva Rajkumar and Puneeth Rajkumar together on screen?
Highlights

ಪುನೀತ್ ರಾಜ್’ಕುಮಾರ್ ಹಾಗೂ ಶಿವರಾಜ್’ಕುಮಾರ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ದುನಿಯಾ ಸೂರಿ ಇವರಿಬ್ಬರಿಗಾಗಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಟಗರು ಚಿತ್ರದ 100 ನೇ ದಿನದ ಸಮಾರಂಭದಲ್ಲಿ ದುನಿಯ ಸೂರಿ ಈ ವಿಚಾರವನ್ನು ಹೊರಹಾಕಿದ್ದಾರೆ. 

ಬೆಂಗಳೂರು (ಜೂ. 23): ಪುನೀತ್ ರಾಜ್’ಕುಮಾರ್ ಹಾಗೂ ಶಿವರಾಜ್’ಕುಮಾರ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ದುನಿಯಾ ಸೂರಿ ಇವರಿಬ್ಬರಿಗಾಗಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ.

ಟಗರು ಚಿತ್ರದ 100 ನೇ ದಿನದ ಸಮಾರಂಭದಲ್ಲಿ ದುನಿಯ ಸೂರಿ ಈ ವಿಚಾರವನ್ನು ಹೊರಹಾಕಿದ್ದಾರೆ. ಪ್ರತಿಯೊಬ್ಬ ಕನ್ನಡಿಗನ ಆಸೆ ನನಸಾಗಿದೆ. ಪುನೀತ್ ಹಾಗೂ ಶಿವಣ್ಣ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರಿಗಾಗಿ ನಾನೊಂದು ಸಿನಿಮಾ ಮಾಡುತ್ತಿದ್ದೇನೆ ಎಂದು ಸೂರಿ ಹೇಳಿದ್ದಾರೆ. 

ಈ ಹಿಂದೆ ರಾಜ್ ಕುಟುಂಬದ ಮೂವರನ್ನು ಹಾಕಿಕೊಂಡು ಚಿತ್ರ ಮಾಡಲು ನಿರ್ದೇಶಕ ರವಿ ವರ್ಮ ಪ್ರಯತ್ನಿಸಿದ್ದರು. ಆದರೆ ಕಾರಣಾಂತರದಿಂದ ಆಗಿರಲಿಲ್ಲ. ಈಗ ದುನಿಯಾ ಸೂರಿ ಅಂತದ್ದೊಂದು ಸಾಹಸಕ್ಕೆ ಮುಂದಾಗಿದ್ದಾರೆ. 
 

loader