ರಕುಲ್ ಪ್ರೀತ್ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದಿದ್ಯಾಕೆ ಗೊತ್ತಾ?

Dulquer Salmaan fans troll Rakul Preet for post on Mahanati
Highlights

ಸಮಂತಾ ಅಕ್ಕಿನೇಲಿ ರಕುಲ್ ಪ್ರೀತ್‌ಗೆ ಓಪನ್ ಫಿಟ್‌ನೆಸ್ ಚಾಲೆಂಜ್ ಹಾಕಿದ್ದು, ಅದನ್ನು ಸ್ವೀಕರಿಸಿದ ರಕುಲ್ ಭರ್ಜರಿ ಫಿಟ್ನೆಸ್ ತಯಾರಿ ನಡೆಸಿದ್ದು ಈಗಷ್ಟೇ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಈಗ ರಕುಲ್ ಪ್ರೀತ್’ಗೆ ದುಲ್ಕರ್ ಸಲ್ಮಾನ್ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಕಾರಣ ಯಾಕೆ ಎಂದು ತಿಳಿಯಬೇಕಿದ್ದರೆ ‘ಮಹಾನಟಿ’ ಚಿತ್ರದತ್ತ ವಾಲಬೇಕಾಗುತ್ತದೆ.

ತೆಲುಗಿನ ಲೆಜೆಂಡ್ ನಟಿ ಸಾವಿತ್ರಿ ಜೀವನ ಚರಿತ್ರೆ ಆಧರಿಸಿ ‘ಮಹಾನಟಿ’ ಹೆಸರಿನ ಚಿತ್ರ ಈಗಾಗಲೇ ತೆರೆಕಂಡಿದೆ. ಅದನ್ನು ಮೊನ್ನೆ ನೋಡಿ ಬಂದ ರಕುಲ್ ತುಂಬಾ ಮೆಚ್ಚಿಕೊಂಡಿದ್ದಾರೆ. ಮೆಚ್ಚಿದ್ದೇ ತಡ ಟ್ವಿಟ್ಟರ್‌ನಲ್ಲಿ ಸೂಪರ್ ಆಕ್ಟಿಂಗ್ ಕೀರ್ತಿ, ಸಮಂತಾ, ವಿಜಯ್ ದೇವರಕೊಂಡ ಎಂದು ಮೂವರಿಗೂ ಅಭಿಂದನೆ ತಿಳಿಸಿದ್ದಾರೆ. 

ಹಾಗೆ ನೋಡಿದರೆ ದುಲ್ಕರ್ ಸಲ್ಮಾನ್ ಚಿತ್ರದಲ್ಲಿ ಪ್ರಮುಖ ಜಮಿನಿ ಗಣೇಶನ್ ಪಾತ್ರ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಆದರೆ ಅವರ ಬಗ್ಗೆ ಒಂದೂ ಮಾತನಾಡದೇ ಇದ್ದದ್ದು ದುಲ್ಕರ್ ಅಭಿಮಾನಿಗಳನ್ನು ಸಹಜವಾಗಿಯೇ  ಕೆರಳಿಸಿದೆ.

ಟ್ವಿಟ್ಟರ್‌ನಲ್ಲಿ ಸಾಕಷ್ಟು ಟಾಂಗ್‌ಗಳನ್ನೂ ಕೊಟ್ಟಿದ್ದಾರೆ. ಕೆಲವರು ನೀವು ಸರಿಯಾಗಿ ಸಿನಿಮಾ ನೋಡದೇ ನಿದ್ದೆ ಮಾಡಿ ಬಂದ ಹಾಗಿದೆ. ಹಾಗಾಗಿ ಇನ್ನೊಮ್ಮೆ ಸಿನಿಮಾ ನೋಡುವುದು ಒಳ್ಳೆಯದು  ಎನ್ನುವ ಸಲಹೆಯನ್ನೂ ಕೊಟ್ಟಿದ್ದಾರೆ.  

loader