Asianet Suvarna News Asianet Suvarna News

ನಟ ವಿಷ್ಣುವರ್ಧನ ನೆನಪಲ್ಲಿ ಕ್ಯಾಲೆಂಡರ್‌

ವಿಭಿನ್ನ ಬಗೆಯ ಕಾರ್ಯಕ್ರಮಗಳ ಮೂಲಕ ಸಾಹಸ ಸಿಂಹ ಡಾ.ವಿಷ್ಣುವರ್ಧನ ಹೆಸರನ್ನು ಅಭಿಮಾನಿಗಳ ಮನಸ್ಸಲ್ಲಿ ಹಸಿರಾಗಿ ಉಳಿಸುತ್ತಾ ಬರುತ್ತಿರುವ ಡಾ. ವಿಷ್ಣು ಸೇನಾ ಸಮಿತಿಯು ಪ್ರತಿ ವರ್ಷದಂತೆ ಈ ವರ್ಷವೂ ಹೊಸ ವರ್ಷಕ್ಕೆ ‘ಕೋಟಿಗೊಬ್ಬ ಕ್ಯಾಲೆಂಡರ್‌’ ಹೊರ ತಂದಿದೆ.

Dr Vishnu Sena Samiti Launches 2019 Calendar
Author
Bengaluru, First Published Dec 25, 2018, 9:07 AM IST

ಹೊಸ ರೀತಿಯ ಪರಿಕಲ್ಪನೆ ಮತ್ತು ವಿನ್ಯಾಸಗಳಿಂದ ಆಕರ್ಷಣೆ ಹುಟ್ಟಿಸುತ್ತಿರುವ ಈ ಕ್ಯಾಲೆಂಡರ್‌ 12 ಪುಟಗಳ ಜತೆಗೆ ಎರಡು ವಿಶೇಷ ಪುಟ ಹೊಂದಿದೆ. ‘ಸಿಂಹಸ್ವರೂಪಿ ಡಾ.ವಿಷ್ಣುವರ್ಧನ’ ಎಂಬ ಪರಿಕಲ್ಪನೆಯಲ್ಲಿ ಡಾ. ವಿಷ್ಣು ಸೇನಾ ಸಮಿತಿಯು ಈ ಕ್ಯಾಲೆಂಡರ್‌ ಪ್ರಕಟಿಸಿ ಹೊರ ತಂದಿದೆ. ನಟ ಡಾ. ವಿಷ್ಣುವರ್ಧನ ಅವರ ವಿಶೇಷ ಫೋಟೋಗಳು ಮತ್ತು ಅವರ ಕೆಲವು ಹೇಳಿಕೆಗಳ ಮೂಲಕ ಈ ಕ್ಯಾಲೆಂಡರ್‌ ಮೂಡಿ ಬಂದಿದೆ.

Dr Vishnu Sena Samiti Launches 2019 Calendar

ಒಂದು ವೃತ್ತಿಪರ ದಿನ ದರ್ಶಿಕೆಯಲ್ಲಿ ಇರುವಂತಹ ರಜೆ ದಿನಗಳು, ರಾಹುಕಾಲ, ಗುಳಿಕಕಾಲ, ಅಮಾವಾಸೆ, ಹುಣ್ಣಿಮೆ ಇತ್ಯಾದಿಗಳೆಲ್ಲವೂ ಈ ಕ್ಯಾಲೆಂಡರ್‌ನಲ್ಲಿವೆ. ವಿಷ್ಣು ಅವರ ಕ್ಯಾಲೆಂಡರ್‌ ಎಂದ ಮಾತ್ರಕ್ಕೆ ಬರೀ ಫೋಟೋಗಳಿಗೆ ಅಥವಾ ಅಭಿಮಾನಿಗಳಿಗೆ ಮಾತ್ರ ಸೀಮಿತವಾಗದೆ ಇಡೀ ಕುಟುಂಬದವರಿಗೆ ಅನುಕೂಲವಾಗುವಂತೆ ರೂಪುಗೊಂಡಿದೆ.

ಸಿಂಹವೊಂದು ಮನೆಯ ಗೋಡೆ ಮೇಲೆ ನೆಡೆದು ಹೋಗುವ ಅನುಭವವನ್ನು ಕಟ್ಟಿಕೊಡುವಂತಹ ಆಕರ್ಷಕ ವಿನ್ಯಾಸ ಮತ್ತು ಸಾಮಾನ್ಯ ಕ್ಯಾಲೆಂಡರ್‌ಗಿಂತ ದುಪ್ಟಟ್ಟು ಗಾತ್ರ ಹೊಂದಿರುವುದು ಈ ಕ್ಯಾಲೆಂಡರ್‌ನ ಮತ್ತೆರೆಡು ವಿಶೇಷಗಳಾಗಿವೆ ಎನ್ನುತ್ತಾರೆ ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌. ಆಕರ್ಷಕ ಈ ಕ್ಯಾಲೆಂಡರ್‌ ಈಗ ಮಾರುಕಟ್ಟೆಗೆ ಬಂದಿದ್ದು, ಬೆಂಗಳೂರು ಸೇರಿ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿನ ಬಸ್ಟ್ಯಾಂಡ್‌ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.

Dr Vishnu Sena Samiti Launches 2019 Calendar

 

Follow Us:
Download App:
  • android
  • ios