ಆದರೆ ಈಗ ನಯಾ ಸಮಾಚಾರ ಏನೆಂದರೆ ‘ಡಾಲಿ’ ಹೆಸರಿನಲ್ಲೇ ಪ್ರಭು ಶ್ರೀನಿವಾಸ್ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಯೋಗೇಶ್ ನಿರ್ಮಾಣ ಮಾಡುತ್ತಿರುವ ಚಿತ್ರ ಇದೇ ವಾರದಲ್ಲಿ ಟೈಟಲ್ ಲಾಂಚ್ ಮಾಡಿಕೊಳ್ಳುವ ತಯಾರಿ ನಡೆಸಿದೆ. ಈ ನಿಟ್ಟಿನಲ್ಲಿ ಸ್ಕ್ರಿಪ್ಟ್ ವರ್ಕ್ ಭರದಿಂದ ಸಾಗುತ್ತಿದ್ದು, ನಾಯಕಿಯ ಹುಡುಕಾಟ ನಡೆದಿದೆ.

ಯಜಮಾನದಲ್ಲಿ ಮಿಠಾಯಿ ಸೂರಿ:

ದರ್ಶನ್ ಅಭಿನಯದ ‘ಯಜಮಾನ’ ಚಿತ್ರದಲ್ಲಿ ಮೇನ್ ವಿಲನ್ ಆಗಿ ಧನಂಜಯ್ ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ಸ್ವತಃ ಸ್ಪಷ್ಟನೆ ನೀಡಿದ ಧನಂಜಯ್ ‘ನನ್ನದು ಬಹಳ ಮುಖ್ಯವಾದ ಪಾತ್ರ. ಆದರೆ ವಿಲನ್ ಅಲ್ಲ. ಮಿಠಾಯಿ ಸೂರಿಯಾಗಿ ಚಿತ್ರದಲ್ಲಿ ಸ್ವಲ್ಪ ಸಮಯ ಬಂದು ಹೋದರೂ ಬಹಳ ಪ್ರಾಮುಖ್ಯತೆ ನನ್ನ ಪಾತ್ರಕ್ಕೆ ಇದೆ’ ಎಂದು ಹೇಳಿಕೊಂಡರು.