ಕಾಲಾ ಚಿತ್ರದಲ್ಲಿ ರಜನಿ ಜೊತೆ ಇದ್ದ ನಾಯಿಗೀಗ ಕೋಟಿ ಕೋಟಿ ಬೆಲೆ!

First Published 11, Mar 2018, 10:12 AM IST
Dog in Rajinikanths Kaala poster is worth 2 crore
Highlights

ನಟ ರಜನೀಕಾಂತ್‌ ಅವರ ಮುಂಬರುವ ‘ಕಾಲಾ ಚಿತ್ರ’ದಲ್ಲಿ ಕಾಣಿಸಿಕೊಂಡಿರುವ ‘ಮಣಿ’ ಹೆಸರಿನ ಬೀದಿ ನಾಯಿಗೆ ಇದೀಗ ಭರ್ಜರಿ ಬೇಡಿಕೆ ಬಂದಿದೆ. ಈ ಶ್ವಾನವನ್ನು ಖರೀದಿಸಲು ರಜನೀಕಾಂತ್‌ ಅಭಿಮಾನಿಗಳು ಕೋಟಿ ಕೋಟಿ ಹಣ ನೀಡುವುದಕ್ಕೂ ಸಿದ್ಧರಿದ್ದಾರೆ!

ನವದೆಹಲಿ: ನಟ ರಜನೀಕಾಂತ್‌ ಅವರ ಮುಂಬರುವ ‘ಕಾಲಾ ಚಿತ್ರ’ದಲ್ಲಿ ಕಾಣಿಸಿಕೊಂಡಿರುವ ‘ಮಣಿ’ ಹೆಸರಿನ ಬೀದಿ ನಾಯಿಗೆ ಇದೀಗ ಭರ್ಜರಿ ಬೇಡಿಕೆ ಬಂದಿದೆ. ಈ ಶ್ವಾನವನ್ನು ಖರೀದಿಸಲು ರಜನೀಕಾಂತ್‌ ಅಭಿಮಾನಿಗಳು ಕೋಟಿ ಕೋಟಿ ಹಣ ನೀಡುವುದಕ್ಕೂ ಸಿದ್ಧರಿದ್ದಾರೆ!

ಕಾಲಾ ಚಿತ್ರಕ್ಕೆ ಸುಮಾರು 30 ಶ್ವಾನಗಳನ್ನು ತೋರಿಸಿದರೂ ಅದನ್ನು ರಜನೀಕಾಂತ್‌ ನಿರಾಕರಿಸಿದ್ದರು. ಕೊನೆಗೆ ಬೇಸತ್ತಿದ್ದ ಪ್ರಾಣಿ ತರಬೇತುದಾರರಾಗಿರುವ ಸಿಮೊನ್‌, ಚೆನ್ನೈನ ಬೀದಿಯೊಂದರಲ್ಲಿ ಸಿಕ್ಕ ನಾಯಿಯನ್ನು ಪಳಗಿಸಿ ಅದಕ್ಕೆ ಮಣಿ ಎಂಬ ಹೆಸರು ನೀಡಿ, ಅದನ್ನು ರಜನಿಗೆ ತೋರಿಸಿದಾಗ ಅದನ್ನು ಅವರು ಒಪ್ಪಿಕೊಂಡಿದ್ದರು. 2.5 ವರ್ಷದ ಈ ಶ್ವಾನ ‘ಮೆಹೆಂದಿ ಸರ್ಕಸ್‌’ ಸೇರಿದಂತೆ 2- 3 ಚಿತ್ರಗಳಲ್ಲಿ ಕಾಣಿಸಿಕೊಂಡಿದೆ.

ಕಾಲಾ ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ ಜನರು ಈ ಶ್ವಾನವನ್ನು ಖರೀದಿಸಲು 2 ರಿಂದ 3 ಕೋಟಿ ರು.ವರೆಗೂ ಆಫರ್‌ ನೀಡಿದ್ದಾರೆ. ಆದರೆ, ಸಿಮೊನ್‌ ಮಾತ್ರ ಮಣಿಯನ್ನು ಮಾರಾಟ ಮಾಡುವ ಯೋಚನೆ ಇಲ್ಲ ಎಂದು ಹೇಳಿದ್ದಾರೆ. ಸಿಮೊನ್‌ ಅವರು ಕಳೆದ ಮೂರು ದಶಕಗಳಿಂದ 800ರಿಂದ 1000 ಚಿತ್ರಗಳಲ್ಲಿ ಪ್ರಾಣಿ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ.

loader