ಬಟ್ಟಲು ಕಂಗಳ ಚೆಲುವೆ ಮಾಧವಿ ಏನ್ ಮಾಡ್ತಾ ಇದ್ದಾರೆ?

First Published 5, Mar 2018, 3:07 PM IST
Do you know where is 80s actress Madhavi now
Highlights

80 ರ ದಶಕದಲ್ಲಿ ಬಟ್ಟಲು ಕಂಗಳ ಚೆಲುವೆ ಮಾಧವಿ ಆ ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು.  

ಬೆಂಗಳೂರು (ಮಾ. 05): 80 ರ ದಶಕದಲ್ಲಿ ಬಟ್ಟಲು ಕಂಗಳ ಚೆಲುವೆ ಮಾಧವಿ ಆ ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಅವರ ಕಂಗಳ ಕಾಂತಿಗೆ ಮಾರುಹೋಗದವರೇ ಇಲ್ಲ.  

 

ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನಟಿಸಿದ ಪ್ರತಿಭಾನ್ವಿತ ನಟಿ. ಇವರು ಹೈದರಾಬಾದ್ ಮೂಲದವರು. ಖ್ಯಾತ ನಿರ್ದೇಶಕ ದಾಸರಿ ನಾರಾಯಣ್ ರಾವ್ ಇವರಿಗೆ ಮೊದಲ ಬಾರಿ ಅವಕಾಶ ನೀಡಿದ್ದು. 13 ನೇ ವಯಸ್ಸಿನಲ್ಲಿ ಇವರು ಬಣ್ಣ ಹಚ್ಚಿದ್ದು. ಅದಾದ ನಂತರ ಸಿನಿಮ ರಂಗಕ್ಕೆ ಕಾಲಿಟ್ಟರು. ಕನ್ನಡದಲ್ಲಿ ರಾಜ್’ಕುಮಾರ್, ವಿಷ್ಣುವರ್ಧನ್ ಜೊತೆಗೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ಕೆಲ ವರ್ಷಗಳ ನಂತರ ತೆರೆಮರೆಯಾದರು.  ಈಗೇನು ಮಾಡ್ತಾ ಇದಾರೆ ಅನ್ನೋ ಕುತೂಹಲ ನಿಮಗಿದೆಯಾ? ಇಲ್ಲಿದೆ ನೋಡಿ. 

 

ಮಾಧವಿ ಪ್ರಸ್ತುತ ನ್ಯೂ ಜೆರ್ಸಿಯಲ್ಲಿ ಪತಿ, ಮೂವರು ಮಕ್ಕಳ ಜೊತೆ ಕುಟುಂಬದ ಜೊತೆ ಸೆಟಲ್ ಆಗಿದ್ದಾರೆ.  ಮತ್ತೊಮ್ಮೆ ಬಣ್ಣ ಹಚ್ಚುತ್ತೀರಾ ಎಂಬ ಪ್ರಶ್ನೆಗೆ ಸುತರಾಂ ಇಲ್ಲ ಎಂದಿದ್ದಾರೆ.  

 

loader