ಇನ್‌ಸ್ಟಾಗ್ರಾಂ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ದಿಶಾ ಪ್ರತಿ ಬಾರಿಯೂ ತನ್ನ ವಿಭಿನ್ನ ಪೋಟೋ ಅಪ್ಲೋಡ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಲೇ ಇರುತ್ತಾರೆ. 

ಎಮ್. ಎಸ್. ಧೋನಿ ಚಿತ್ರದ ಮೂಲಕವೇ ವಿಪರೀತ ಫ್ಯಾನ್ಸ್ ಪಡೆದು, ಪ್ರಶಸ್ತಿ ಪಡೆದ ಅದ್ಭುತ ನಟಿ ದಿಶಾ. ಬಾಗಿ-2 ಚಿತ್ರದ ಮೂಲಕ ಬಾಲಿವುಡ್ ಮನಗೆದ್ದ ದಿಶಾ ತನ್ನ ಬಿಕಿನಿ ಪೋಟೋದಿಂದ ಜನರಿಗೆ ಫಿಟ್‌ನೆಸ್ ಗೋಲ್ ಕೊಡುತ್ತಿರುತ್ತಾರೆ. ರಜಾ ಅಥವಾ ಬಿಡುವಿನ ವೇಳೆ ಸ್ವಿಮ್ಮಿಂಗ್ ಪೂಲ್ ಅಥವಾ ಬೀಚ್‌ ಭೇಟಿ ನೀಡು ದಿಶಾ, ಸ್ವಿಮ್ಮಿಂಗ್ ಸೂಟ್‌ನಲ್ಲಿ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಮೋನೊಕಿನ್ ಬಿಕಿನಿಯಲ್ಲಿಯೂ ಆಗಾಗ ಮಿಂಚುತ್ತಾರೆ.

ಬರೀ ಬಿಕಿನಿಯಲ್ಲಿ ಮಾತ್ರವಲ್ಲ, ಸ್ವಿಮ್ ಸೂಟ್‌ನಲ್ಲಿ ದಿಶಾ ಹಾಟ್ ಆಗಿ ಕಾಣಿಸ್ತಾಳೆ ಎಂಬುದನ್ನು ಪ್ರೂವ್ ಮಾಡಿದ್ದಾಳೆ. ಮತ್ತದೇ ವಿಶೇಷ ಬಟ್ಟೆ ತೊಟ್ಟು, ಫೋಟೋಗಳನ್ನು ಇನ್‌ಸ್ಟಾ ಗ್ರಾಂ‌ನಲ್ಲಿ ಶೇರ್ ಮಾಡಿದ್ದು, ದಿನದೊಳಗೆ ಇದಕ್ಕೆ 12 ಮಿಲಿಯನ್ ಲೈಕ್ಸ್ ಬಂದಿದೆ ಎಂದರೆ ದಿಶಾ ಅದೆಷ್ಟು ಹಾಟ್ ಆಗಿ ಕಾಣಿಸ್ತಿದಾರೆ ನೀವೇ ನೋಡಿ.

Scroll to load tweet…
Scroll to load tweet…