ನಿರ್ದೇಶಕರಾದ ರಿಶಬ್ ಶೆಟ್ಟಿ,ಹೇಮಂತ್ ರಾವ್, ಆಕಾಶ್, ನಟಿ ನಿಧಿ ಸುಬ್ಬಯ್ಯ ಈಗ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಖ್ಯಾತಿಯ ಸುನಿ.

ಚಿಕ್ಕಮಗಳೂರು(ಫೆ.18): ಕನ್ನಡ ಚಿತ್ರೋದ್ಯಮದಲ್ಲಿ ಈಗ ಮದುವೆಗಳ ಯೋಗ. ಮೊದಲು ರಾಕಿಂಗ್ ಸ್ಟಾರ್ ಯಶ್, ನಂತರ ನಿರ್ದೇಶಕರಾದ ರಿಶಬ್ ಶೆಟ್ಟಿ,ಹೇಮಂತ್ ರಾವ್, ಆಕಾಶ್, ನಟಿ ನಿಧಿ ಸುಬ್ಬಯ್ಯ ಈಗ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಖ್ಯಾತಿಯ ಸುನಿ.,

ಸುನಿ ತಮ್ಮ ಪ್ರೇಯಸಿ ಸೌಂದರ್ಯ ಗೌಡ ಅವರನ್ನು ನಿನ್ನೆ ಫೆ.17 ರಂದು ಚಿಕ್ಕಮಗಳೂರಿನಲ್ಲಿ ಕುಟುಂಬಸ್ತರು, ಸ್ನೇಹಿತರ ಸಮ್ಮುಖದಲ್ಲಿ, ,ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಎಲ್'ಎಲ್'ಬಿ ಪದವಿಧರೆ ಸೌಂದರ್ಯ ಗೌಡ ಅವರನ್ನು 4 ವರ್ಷಗಳಿಂದ ಪ್ರೀತಿಸುತ್ತಿದ್ದರು. ಸೌಂದರ್ಯ ಗೌಡ ಬರಹಗಾರ್ತಿ ಕೂಡ. ,

ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಮೂಲಕ ತಮ್ಮ ಸಿನಿಮಾ ಪಯಣವನ್ನು ಆರಂಭಿಸುವುದರ ಜೊತೆಗೆ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ಶ್ವೇತ ಶ್ರೀವಾತ್ಸವ ಅವರನ್ನು ಗಾಂಧಿನಗರಕ್ಕೆ ಪರಿಚಯಿಸಿದ್ದರು. ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಭಾಗ ಒಂದು ಮತ್ತು ಭಾಗ 2, , ,ಬಹುಪರಾಕ್ ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ಅವರ ಸಾರಥ್ಯದಲ್ಲಿ ಆಪರೇಷನ್ ಅಲಮೇಲಮ್ಮ ಚಿತ್ರ ಇನ್ನಷ್ಟೆ ತೆರೆ ಕಾಣಬೇಕಿದೆ.,

--,