ರಾಕಿಭಾಯ್ ಯಶ್ ಕೆಜಿಎಫ್ 2 ಭಾರೀ ನಿರೀಕ್ಷೆ ಮೂಡಿಸಿದೆ. ರಾಕಿಭಾಯ್ ಬರ್ತಡೇಗೆ ಅಂದರೆ ಜನವರಿ 8 ಕ್ಕೆ ಕೆಜಿಎಫ್ ಟೀಸರ್ ರಿಲೀಸ್ ಆಗುತ್ತೆ ಎಂದು ಚಿತ್ರತಂಡ ಹೇಳಿತ್ತು. ಯಶ್ ಬರ್ತಡೇ ಸಂಭ್ರಮವನ್ನು ಹಾಗೂ ಟೀಸರ್ ರಿಲೀಸನ್ನು ಸೆಲಬ್ರೇಟ್ ಮಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ನಿರ್ದೆಶಕ ಪ್ರಶಾಂತ್ ನೀಲ್ ಅಭಿಮಾನಿಗಳು ಶಾಕಿಂಗ್ ನ್ಯೂಸ್ ನೀಡಿದ್ದಾರೆ . 

ರಾಕಿಭಾಯ್ ಬರ್ತಡೇದಿನ ಟೀಸರ್ ಬಿಡುಗಡೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 'ಕೆಜಿಎಫ್ 2 ಟೀಸರನ್ನು ನಾವು ಜನವರಿ 08 ರಂದು ರಿಲೀಸ್ ಮಾಡುತ್ತಿಲ್ಲ. ಜನವರಿ 06 ರ ವರೆಗೆ ಶೂಟಿಂಗ್ ನಡೆಯುತ್ತಿದ್ದು 7 ರಂದು ವಾಪಸ್ಸಾಗುತ್ತಿದ್ದೇವೆ. ನೀವೆಲ್ಲಾ ಕೆಜಿಎಫ್ 2 ಬಗ್ಗೆ ಅಪಾರವಾದ ಪ್ರೀತಿ, ವಿಶ್ವಾಸ, ನಿರೀಕ್ಷೆ ಇಟ್ಟೀದ್ದೀರಿ. ಅದನ್ನು ಸುಳ್ಳು ಮಾಡಲು ನಮಗಿಷ್ಟವಿಲ್ಲ. ದಿ ಬೆಸ್ಟನ್ನು ನಿಮಗೆ ಕೊಡಲು ಬಯಸುತ್ತೇವೆ. ಹಾಗಾಗಿ ಟೀಸರ್ ಬರುವುದು ಸ್ವಲ್ಪ ತಡವಾಗುತ್ತದೆ. ಜನವರಿ 08 ಯಶ್ ಬರ್ತಡೇ ದಿನ ಕೆಜಿಎಫ್ 2 ಪೋಸ್ಟರನ್ನು ರಿಲೀಸ್ ಮಾಡಲಿದ್ದೇವೆ. ಅದು ನಿಮಗಿಷ್ಟವಾಗುತ್ತದೆ' ಎಂಬ ನಂಬಿಕೆ ನಮಗಿದೆ. ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.  

ಸಲಾಂ ರಾಕಿಭಾಯ್..! ವಿಶ್ವ ದಾಖಲೆ ಮಾಡಲಿದೆ ಯಶ್ ಬರ್ತ್ ಡೇ ಕೇಕ್!

ಈ ಬಾರಿ ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನ ವಿಶೇಷತೆಯಲ್ಲಿ ವಿಶೇಷವಾಗಿಯೇ ಇರಲಿದೆ. ಬೆಂಗಳೂರಿನ ಯಶ್ ಅಪ್ಪಟ ಅಭಿಮಾನಿ ವೇಣು ಗೌಡ, ತಮ್ಮ ನೆಚ್ಚಿನ ನಾಯಕನಿಗೆ ಕೇಕ್ ಮಾಡಿಸಲಿದ್ದಾರೆ. 5 ಸಾವಿರ ಕೆ.ಜಿ.ತೂಕದ ಕೇಕ್ ಅದು. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗಾಗಿ 4500 ಕೆಜಿ ತೂಕದ ಕೇಕ್ ತಯಾರ್ ಆಗಿತ್ತು.ಆದರೆ,ರಾಕಿ ಭಾಯ್ ಜನ್ಮ ದಿನ ಕೇಕ್ 5 ಸಾವಿರ ಕೆ.ಜಿ ಇದೆ. 

ಇದು ವಿಶ್ವ ದಾಖಲೆನೇ ಸರಿ. ಇಲ್ಲಿವರೆಗೂ ಯಾರೂ ತಮ್ಮ ನೆಚ್ಚಿನ ನಾಯಕನಿಗಾಗಿ 5000 ಕೆ.ಜಿ.ತೂಕದ ಕೇಕ್ ಮಾಡಿಸಿಯೇ ಇಲ್ಲ.ಅಷ್ಟು ವಿಶೇಷವಾದ ಈ ಕೇಕ್ ತಯಾರಿಯನ್ನ ನಾಗರಭಾವಿಯ ಶ್ರೀ ರಾಮ್ ಭವನ್ ಸ್ಟೀಟ್ಸ್ ನವ್ರು ಎರಡು ದಿನದ ಮುಂಚೆಯೇ ನಂದಿ ಲಿಂಕ್ ಗ್ರೌಂಡ್ ಅಲ್ಲಿ ಆರಂಭಿಸಲಿದ್ದಾರೆ.