ಹಳೆ ಹುಡುಗಿ ಕೆಮ್ಮಿದರೆ ಪ್ರಳಯಾನೇ ಗ್ಯಾರಂಟಿ ಅಂತ ಯೋಗರಾಜ ಭಟ್ಟರು ಬರೆದಿದ್ದರು. ಈಗ ಕರಣ್ ಜೋಹರ್ ಬದುಕಲ್ಲಿ ಹಾಗೇ ಆಗತ್ತೆ ಅನ್ಸತ್ತೆ. ನಾಲ್ಕೈದು ಹುಡುಗಿಯರು ಅವರ ಮೇಲೆ ಮುನಿಸಿಕೊಳ್ಳಬಹುದು. ಯಾಕೆಂದರೆ ಅವರು ತಮ್ಮ ಹೊಸ ಸಿನಿಮಾ ಸ್ಟುಡೆಂಟ್ ಆಫ್ ದಿ ಯಿಯರ್ ಎರಡನೇ ಭಾಗಕ್ಕೆ ನಾಯಕಿ ಹುಡುಕುತ್ತಿದ್ದರು.
ಮುಂಬೈ(ಜು.17): ಹಳೆ ಹುಡುಗಿ ಕೆಮ್ಮಿದರೆ ಪ್ರಳಯಾನೇ ಗ್ಯಾರಂಟಿ ಅಂತ ಯೋಗರಾಜ ಭಟ್ಟರು ಬರೆದಿದ್ದರು. ಈಗ ಕರಣ್ ಜೋಹರ್ ಬದುಕಲ್ಲಿ ಹಾಗೇ ಆಗತ್ತೆ ಅನ್ಸತ್ತೆ. ನಾಲ್ಕೈದು ಹುಡುಗಿಯರು ಅವರ ಮೇಲೆ ಮುನಿಸಿಕೊಳ್ಳಬಹುದು. ಯಾಕೆಂದರೆ ಅವರು ತಮ್ಮ ಹೊಸ ಸಿನಿಮಾ ಸ್ಟುಡೆಂಟ್ ಆಫ್ ದಿ ಯಿಯರ್ ಎರಡನೇ ಭಾಗಕ್ಕೆ ನಾಯಕಿ ಹುಡುಕುತ್ತಿದ್ದರು.
ಟೈಗರ್ ಶ್ರಾಫ್ ನಾಯಕನಾಗಿ ನಟಿಸುವ ಈ ಸಿನಿಮಾದ ನಾಯಕಿಯ ಬಗ್ಗೆಯಂತೂ ಸಿಕ್ಕಾಪಟ್ಟೆ ಚರ್ಚೆ ನಡೆದಿತ್ತು. ಒಂದ್ಸಲ ಶ್ರೀದೇವಿ ಮಗಳು ಜಾನ್ವಿ ಕಪೂರ್ ಈ ಸಿನಿಮಾದಲ್ಲಿ ನಟಿಸುತ್ತಾಳೆ ಅಂತಾಯಿತು. ಮತ್ತೊಂದ್ಸಲ ಸೈಫ್ ಅಲಿ ಖಾನ್ ಮಗಳಾದ ಸಾರಾ ಅಲಿ ಖಾನ್ ಹೆಸರು ಕೇಳಿ ಬಂತು. ಆಮೇಲೆ ಚುಂಕಿ ಪಾಂಡೆಯವರ ಮಗಳು ಅನನ್ಯ ಪಾಂಡೆ ನಟಿಸುತ್ತಾಳೆ ಅಂತಾಯಿತು.
ಆದರೆ ಈಗ ಅವೆಲ್ಲರನ್ನೂ ಸೈಡಿಗೆ ಹಾಕಿ ಹೊಸ ಹುಡುಗಿ ಎಂಟ್ರಿ ಕೊಟ್ಟಾಗಿದೆ. ಆಕೆ ಹೆಸರು ತಾರಾ ಸುತಾರಿಯಾ. ಹೊಸಬಳೇನಲ್ಲ. ಹೃತಿಕ್ ರೋಷನ್‌ರ ‘ಗುಝಾರಿಶ್’ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದಳು. ಅದಾದ ನಂತರ ‘ಎಂಟರ್ ಟೇನ್‌ಮೆಂಟ್ ಕೇಲಿಯೆ ಕುಚ್ ಭಿ ಕರೇಗಾ’ ಎಂಬ ರಿಯಾಲಿಟಿ ಶೋದಲ್ಲಿ ನಟಿಸಿದ್ದಳು. ಈಗ ಕರಣ್ ಜೋಹರ್ ತಂಡಕ್ಕೆ ಸೇರಿದ್ದಾಳೆ. ಇದೇನಾಯಿತು ಅವರನ್ನೆಲ್ಲಾ ಬಿಟ್ಟೇ ಬಿಟ್ರಾ ಅಂತ ಕೇಳಿದ್ದಕ್ಕೆ, ರೂಮರ್‌ಗಳಿಗೆಲ್ಲಾ ನಾನು ಉತ್ತರಿಸಬೇಕಿಲ್ಲ ಎಂದಿದ್ದಾರಂತೆ ಕರಣ್ ಜೋಹರ್.
