ನವದೆಹಲಿ(ಆ.04): ಮಲಯಾಳಂ ನಟಿ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದಿಲೀಪ್‌ರ ಮೊದಲ ಪತ್ನಿ ಮಂಜು ವಾರಿಯರ್ ಅಲ್ಲ. 1998ರಲ್ಲಿ ಮಂಜು ವಾರಿಯರ್‌ರನ್ನು ವಿವಾಹವಾಗುವುದಕ್ಕೂ ಮುನ್ನ ದಿಲೀಪ್ ತಮ್ಮ ಸಂಬಂಧಿಯೊಬ್ಬರನ್ನು ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. 1990ರಲ್ಲಿ ಚಿತ್ರರಂಗ ಪ್ರವೇಶಕ್ಕೆ ಮುನ್ನವೇ ದಿಲೀಪ್ ವಿವಾಹವಾಗಿದ್ದು, ಮದುವೆಯನ್ನು ಅಲುವಾದ ದೇಸಾಂನಲ್ಲಿರುವ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು.

ಬಳಿಕ ಅವರು ಮಂಜು ವಾರಿಯರ್ ಅವರನ್ನು ವಿವಾಹವಾದರು. ಈ ವೇಳೆ ಕೆಲ ಸಂಬಂಧಿಕರು ಹಳೆಯ ವಿವಾಹದ ವಿಷಯ ಪ್ರಸ್ತಾಪಿಸಿದಾಗ, ಮೊದಲ ಹೆಂಡತಿಯನ್ನು ದಿಲೀಪ್ ಗಲ್ಫ್ ದೇಶಕ್ಕೆ ಕಳುಹಿಸಿದ್ದಾರೆ. ಆದರೆ, ಇಬ್ಬರೂ ಅಧಿಕೃತವಾಗಿ ಬೇರೆ ಬೇರೆಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಮಲಯಾಳಂ ಮನೋರಮಾ ವರದಿ ಮಾಡಿದೆ. 2 ವರ್ಷಗಳ ಹಿಂದೆ ಮಂಜು ವಾರಿಯರ್ ಅವರಿಗೆ ಡೈವೋರ್ಸ್ ನೀಡಿದ್ದ ದಿಲೀಪ್, ನಟಿ ಕಾವ್ಯಾರನ್ನು ವರಿಸಿದ್ದರು.