ಬೆಂಗಳೂರು (ಡಿ. 05): ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ದಿಗಂತ್ ಹಾಗೂ ಐಂದ್ರಿತಾ ಡಿಸೆಂಬರ್ 11 ಹಾಗೂ 12ರಂದು ಹಸೆಮಣೆ ಏರಲಿದ್ದಾರೆ. 

ಮನಸಾರೆ, ಪಾರಿಜಾತ, ಪಂಚರಂಗಿ ಸಿನಿಮಾಗಳಲ್ಲಿ  ಒಟ್ಟಾಗಿ ನಟಿಸಿದ್ದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಲವ್ವಲ್ಲಿ ಬಿದ್ದು ಸಾಕಷ್ಟು ವರ್ಷಗಳೇ ಆಗಿವೆ. ಈ ಪ್ರೀತಿಗೆ ಅಧಿಕೃತವಾಗಿ ಮದುವೆ ಮುದ್ರೆ ಬೀಳಲಿದೆ. 

ಐಂದ್ರಿತಾ ರೈ ಬಂಗಾಳಿ ಚೆಲುವೆ. ದಿಗಂತ್ ಮಲೆನಾಡಿನ ಹುಡುಗ. ಬಾಂಗ್ ವೆಡ್ಸ್ ಬೊಮ್ಮನ್ ಎಂದು ಇವರಿಬ್ಬರ ಮದುವೆ ಟ್ರೆಂಡ್ ಆಗುತ್ತಿದೆ.  ಮದುವೆ ಆಮಂತ್ರಣ ಪತ್ರವೂ ಸಕತ್ ಕ್ರಿಯೇಟೀವಾಗಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

ಈ ಆಮಂತ್ರಣ ಪತ್ರಿಕೆ ಸಖತ್ ಡಿಫರೆಂಟಾಗಿದೆ. ಬಾಂಗ್ಸ್ ವೆಡ್ಸ್ ಬೊಮ್ಮನ್ ಎಂದು ಬರೆಯಲಾಗಿದೆ. ನೋಡುವುದಕ್ಕೂ ಕ್ಯೂಟ್ ಆಗಿದೆ. 

ದಿಗ್ಗಿ- ಆ್ಯಂಡಿ ಮದುವೆಗೆ ಹೋಗುವವರಿಗೆ ಕಂಡೀಶನ್ ಇದೆ. ಆಮಂತ್ರಣ ಪತ್ರಿಕೆಯಲ್ಲಿ ಕಂಡೀಶನ್ ಹಾಕಲಾಗಿದೆ. ಮದುವೆಗೆ ಹೋಗುವವರು ಅಪ್ಪಟ ಭಾರತೀಯ ಶೈಲಿಯಲ್ಲಿ ಹೋಗಬೇಕಂತೆ! 

ಕುಟುಂದವರು, ಹತ್ತಿರದ ಬಂಧುಗಳಿಗಾಗಿ ಮಲೆನಾಡ ಶೈಲಿಯಲ್ಲಿ ಆಮಂತ್ರಣ ಪತ್ರ ಮಾಡಿಸಿದ್ದಾರೆ.