ವರ್ಷದ ಹಿಂದೆ ಇದು ‘ಟಿಪಿಕಲ್ ಬ್ರಾಹ್ಮಣ’ಎನ್ನುವ ಹೆಸರಲ್ಲಿ ಈ ಸಿನಿಮಾ ಸುದ್ದಿ ಮಾಡಿತ್ತು. ಆದರೆ ಆ ಟೈಟಲ್‌ಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅನುಮತಿ ಸಿಗದ ಕಾರಣ, ಟೈಟಲ್ ಬದಲಾಯಿಸಿಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶ್ರೀಹರಿ ಆನಂದ್. ಅಮೆರಿಕ ವಾಸಿ ಕನ್ನಡಿಗ ರಮೇಶ್ ರಾಮಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಯುವ ಪ್ರತಿಭೆ ಪ್ರತೀಕ್ ಚಿತ್ರದ ನಾಯಕ. ದಿವ್ಯಾ ಗೌಡ ನಾಯಕಿ. ಚಿತ್ರೀಕರಣ ಮುಗಿದಿದೆ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಹಸ ನಿರ್ದೇಶಕ ವಿಕ್ರಮ್!

ದಾಂಡೇಲಿ, ಆಗುಂಬೆ, ಹುಬ್ಬಳ್ಳಿ ಹಾಗೂ ಬೆಂಗಳೂರು ಸುತ್ತ ಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರ ತಂಡ ಇದೀಗ ಟೀಸರ್ ಲಾಂಚ್ ಮೂಲಕ ಸದ್ದು ಮಾಡಿದೆ.‘ ಇದು ಎರಡು ಕೋನಗಳಲ್ಲಿ ಸಾಗುವ ಕತೆ.

ಪೋಟೋ ಕ್ರೇಜ್‌ನಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ಮಂಗಳೂರು ಹುಡುಗಿ !

ಸಮಾಜಮುಖಿಯಾದ ಕಥಾ ನಾಯಕ ತನ್ನ ಕೆಲಸ ತಾನು ಮಾಡುತ್ತಾ ಹೋಗುತ್ತಾನೆ. ಅದರ ಫಲಾಫಲ ಆತನಿಗೆ ಹೇಗೆ ದಕ್ಕುತ್ತದೆ ಎನ್ನುವುದು ಚಿತ್ರದ ತಿರುಳು ಎನ್ನುತ್ತಾರೆ ನಿರ್ದೇಶಕರು. ಚಿತ್ರದ ಮೂಲ ಕತೆ 1850ಕ್ಕೆ ಸಂಬಂಧಿಸಿದ್ದು. ಆದರೆ ಅದನ್ನು ಈ ಕಾಲಕ್ಕೆ ತಕ್ಕಂತೆ ಹೇಳಲಾಗಿದೆಯಂತೆ. ಚಿತ್ರವನ್ನು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆಯಂತೆ. ಋತ್ವಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ.

.