ಮುಂಬೈ(ಅ.9):  ಸುಶಾಂತ್ ಸಿಂಗ್ ರಜಪೂತ್ ಅಭಿನಯದ ‘ಎಂ.ಎಸ್‌. ಧೋನಿ: ದಿ ಅನ್​ಟೋಲ್ಡ್ ಸ್ಟೋರಿ’ಹಿಂದಿ ಸಿನಿಮಾ 100 ಕೋಟಿಗೂ ಹೆಚ್ಚು ಕೊಳ್ಳೆ ಹೊಡೆದಿದೆ. ಸೆ. 30 ರಂದು ವಿಶ್ವದದ್ಯಾಂತ 61 ರಾಷ್ಟ್ರಗಳಲ್ಲಿ ತೆರೆ ಕಂಡ ಧೋನಿ ಇಲ್ಲಿಯವರೆಗೂ 103.4 ಕೋಟಿ ಹಣ ಗಳಿಸಿದೆ. ಚಿತ್ರವನ್ನು ನೀರಜ್‌ ಪಾಂಡೆ ನಿರ್ದೇಶಿಸಿದ್ದು, ಸುಶಾಂತ್‌ ಸಿಂಗ್‌ ರಜಪೂತ್‌, ಅನುಪಮ್‌ ಖೇರ್‌, ಭೂಮಿಕ  ಚಾವ್ಲಾ ಹಾಗೂ ದಿಶಾ ಪಟನಿ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.