ಧೀರೇನ್ ರಾಮ್‌ಕುಮಾರ್ ದಾರಿತಪ್ಪಿದ ಮಗ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಒಳಗೆ ಬರುತ್ತಿದ್ದಾರೆ. ಅವರ ಜತೆ ಮಾತುಕತೆ.
ಹೀರೋ ಆಗ್ಬೇಕು ಅಂತೆನಿಸಿದ್ದು ಯಾಕೆ?
ಹೀರೋ ಅಂತೇನಲ್ಲ, ನಟ ಆಗ್ಬೇಕು ಅಂತ ನನ್ನೊಳಗೆ ಆಸಕ್ತಿ ಶುರುವಾಗಿದ್ದಕ್ಕೆ ಮುಖ್ಯವಾಗಿ ನಮ್ಮ ಫ್ಯಾಮಿಲಿ ವಾತಾವರಣವೇ ಕಾರಣ. ತಾತ, ಅಜ್ಜಿ, ಅಪ್ಪ, ಮಾವಂದಿರು, ಹಾಗೆಯೇ ಮುರುಳಿ ಮಾಮ, ವಿಜಯ ರಾಘವೇಂದ್ರ ಮಾಮ, ವಿನಯ್ ಸೇರಿದಂತೆ ಎಲ್ಲರೂ ಸಿನಿಮಾದ ನಂಟು ಹೊಂದಿದವರೇ. ಅವರ ಪ್ರಭಾವ ಸಹಜವಾಗಿಯೇ ನನ್ನ ಮೇಲಿತ್ತು. ಜತೆಗೆ ಅಮ್ಮನ ಜತೆಗೆ ಎಲ್ಲಿಗೆ ಹೋದ್ರು, ಮಗ ಯಾವಾಗ ಸಿನಿಮಾಕ್ಕೆ ಬರ್ತಾನೆ ಅಂತ ಕೇಳ್ತಿದ್ರು. ಒಂದ್ರೀತಿ ಅದೇ ನನಗೆ ಸ್ಫೂರ್ತಿ ಆಯಿತು.
ಸಿನಿಮಾದ ತಯಾರಿ ಹೇಗಿದೆ?
ನಟನೆಯ ಕಲಿಕೆ ಅನ್ನೋದು ನಿರಂತರ. ಅದು ಯಾವುದು ಒಂದುಸಿನಿಮಾಕ್ಕೆ ಮುಗಿದು ಹೋಗುವುದಲ್ಲ. ಡಾನ್ಸ್, ಜಿಮ್, ಆ್ಯಕ್ಟಿಂಗ್ ಎಲ್ಲವೂ ಕಲಿಕೆ ಹಂತದಲ್ಲೇ ಇವೆ. ಬೇಸಿಕ್ ಆ್ಯಕ್ಟಿಂಗ್ ಕಲಿಕೆ ಏನು ಅಂತ ಬಂದಾಗ ಅಭಿನಯ ತರಂಗದಲ್ಲಿ ನಟನೆ ಅಭ್ಯಾಸ ಮಾಡಿದ್ದೇನೆ. ಹಾಗೆಯೇ ನಿರ್ದೇಶಕ ಗಿರಿರಾಜ್ ಬಳಿ ಒಂದಷ್ಟು ಕಲಿತುಕೊಂಡಿದ್ದೇನೆ. ಜತೆಗೆ ಈ ಸಿನಿಮಾಕ್ಕೆ ವರ್ಕ್ ಶಾಪ್ ಕೂಡ ನಡೆಯುತ್ತಿದೆ.
ಜಯಣ್ಣ-ಭೋಗೇಂದ್ರ ಜೋಡಿಗೆ ನೀವು ಪರಿಚಯವಾಗಿದ್ದು ಹೇಗೆ?
ಬಳ್ಳಾರಿಯಲ್ಲಿ ‘ರಣವಿಕ್ರಮ’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅಪ್ಪು ಮಾಮ ಜತೆಗೆ ನಾನು ಅಲ್ಲಿಗೆ ಹೋಗಿದ್ದೆ. ಆಗ ಜಯಣ್ಣ ಅವರು ನನಗೆ ಪರಿಚಯವಾಗಿದ್ದರು. ನನ್ನನ್ನು ನೋಡಿ ಏನ್ ಮಾಡ್ತಿದ್ದೀಯಾ ಅಂತ ಕೇಳಿದ್ರು. ಹಾಗೆಯೇ ಆತನಿಗೆ ಸಿನಿಮಾ ಆಸಕ್ತಿ ಇದೆಯಾ ಅಂತ ಕುಮಾರ್ ಮಾಮನ ಹತ್ತಿರ ಕೇಳಿದ್ರು. ಆದ್ರೆ ನಾನಾಗ ಇಂಜಿನಿಯರಿಂಗ್ ಓದುತ್ತಿದ್ದೆ. ಹಾಗಾಗಿ ಸದ್ಯಕ್ಕೆ ಸಿನಿಮಾ ಬೇಡ ಅಂದಿದ್ದೆ. ಓದು ಮುಗಿದ ನಂತರ ಅವರೇ ಭೇಟಿ ಆಗಲು ಹೇಳಿದ್ರು. ನಟನೆಯತ್ತ ಆಸಕ್ತಿ ಇದೆಯಾ ಅಂತ ಕೇಳಿದ್ರು. ಖಂಡಿತಾ ಮಾಡ್ತೀನಿ ಅಂದೆ. ಧೀರೇನ್ ರಾಮ್‌ಕುಮಾರ್ ಸಂದರ್ಶನ ಆ್ಯಕ್ಷನ್, ಲವ್, ಸೆಂಟಿಮೆಂಟ್ ಎಲ್ಲದಕ್ಕೂ ಆದ್ಯತೆ ನೀಡಿಯೇ ಕತೆ ಹೆಣೆದಿದ್ದಾರೆ ನಿರ್ದೇಶಕರು. ಇದು ಪಕ್ಕಾ ಸ್ವಮೇಕ್ ಸಿನಿಮಾ. ನನ್ನನ್ನು ವಿಭಿನ್ನವಾಗಿ ತೋರಿಸಬೇಕು, ಅದ್ಧೂರಿಯಾಗಿ ತೆರೆಗೆ ತರಬೇಕು ಅಂತಲೇ ಪ್ಲ್ಯಾನ್ ಮಾಡಿಕೊಂಡಿದ್ದಾರೆ ನಿರ್ಮಾಪಕರು.
ಮೊದಲ ಸಿನಿಮಾದ ಟೈಟಲ್ ಬಗ್ಗೆ ಏನ್ ಹೇಳ್ತೀರಾ?
ಖುಷಿಯಿದೆ. ಸಿನಿಮಾಕ್ಕೆ ಇಂತಹದೊಂದು ಟೈಟಲ್ ಮಾಡಿದ್ದೇವೆ ಅಂತ ಮೊದಲ ಸಲ ನಿರ್ದೇಶಕರು ಹೇಳಿದಾಗ ಒಂಥರ ಥ್ರಿಲ್ ಆಯಿತು. ಅದೇನು ಸಂಬಂಧವೋ ಗೊತ್ತಿಲ್ಲ, ತಾತನ ಸಿನಿಮಾದ ಟೈಟಲ್ ನನ್ನ ಸಿನಿಮಾಕ್ಕೆ ಸಿಕ್ತು ಅಂತ ಸಂಭ್ರಮಪಟ್ಟೆ. ಮನೆಯಲ್ಲಿ ಅಮ್ಮ ಹಾಗೂ ಅಪ್ಪ ಕೂಡ ಖುಷಿಯಾದ್ರು. ಈ ಮೂಲಕ ತಾತ ಆಶೀರ್ವಾದ ಸಿಗುತ್ತಿದೆ.
ಮೊದಲ ಸಿನಿಮಾದಲ್ಲಿ ಏನೇನಿರುತ್ತೆ?
ಜಯಣ್ಣ-ಭೋಗೇಂದ್ರ ನಿರ್ಮಾಣದ ಸಿನಿಮಾ ಅಂದ್ಮೇಲೆ ಹೆಚ್ಚು ಹೇಳಬೇಕಿಲ್ಲ. ಕಮರ್ಷಿಯಲ್ ಎನ್ನುವ ಎಲ್ಲಾ ಅಂಶಗಳು ಈ ಚಿತ್ರದಲ್ಲಿವೆ. ಆ್ಯಕ್ಷನ್, ಲವ್, ಸೆಂಟಿಮೆಂಟ್ ಎಲ್ಲದಕ್ಕೂ ಆದ್ಯತೆ ನೀಡಿಯೇ ಕತೆ ಹೆಣೆದಿದ್ದಾರೆ ನಿರ್ದೇಶಕರು. ಇದು ಪಕ್ಕಾ ಸ್ವಮೇಕ್ ಸಿನಿಮಾ. ನನ್ನನ್ನು ವಿಭಿನ್ನವಾಗಿ ತೋರಿಸಬೇಕು, ಅದ್ಧೂರಿಯಾಗಿ ತೆರೆಗೆ ತರಬೇಕು ಅಂತಲೇ ಪ್ಲ್ಯಾನ್ ಮಾಡಿಕೊಂಡಿದ್ದಾರೆ ನಿರ್ಮಾಪಕರು.
