ಸನ್ನಿ ಲಿಯೋನ್ ಅಭಿಮಾನಿಗಳಿಂದ ಒಂದೇ ಸಮನೆ ಕಾಲ್ ಅಟೆಂಡ್ ಮಾಡಿ ಮಾಡಿ ಇಲ್ಲೊಬ್ಬ ಸುಸ್ತಾಗಿ ಪೊಲೀಸ್ ಮೊರೆ ಹೋಗಿದ್ದಾನೆ. 

ದೆಹಲಿ ಮೂಲದ ಪುನೀತ್ ಅಗರ್ ವಾಲ್ ಎಂಬುವವರಿಗೆ ಸನ್ನಿ ಲಿಯೋನ್ ಅಭಿಮಾನಿಗಳು ದೇಶ -ವಿದೇಶಗಳಿಂದ ಒಂದೇ ಸಮನೆ ಫೋನ್ ಮಾಡಿ ನಾವು ಸನ್ನಿ ಲಿಯೋನ್ ಜೊತೆ ಮಾತನಾಡಬೇಕು ಎಂದು ಕೇಳುತ್ತಿದ್ದಾರಂತೆ! ನಾನು ಸನ್ನಿ ಲಿಯೋನ್ ಅಲ್ಲ, ನನಗೆ ಕಾಲ್ ಮಾಡಬೇಡಿ ಎಂದು ಎಷ್ಟೇ ಕನ್ವಿನ್ಸ್ ಮಾಡಿದ್ರೂ ಕರೆ ಬರುವುದು ಮಾತ್ರ ನಿಂತಿಲ್ಲ. ಕೊನೆಗೆ ಬೇಸತ್ತ ಪುನೀತ್ ಪೊಲೀಸರ ಮೊರೆ ಹೋಗಿದ್ದಾರೆ. 

ವಿವಾದದ ಬಳಿಕ ಮನೆಗೆ ಹೊಸ ಅತಿಥಿ ಬರಮಾಡಿಕೊಂಡ ಕಂಗನಾ!

‘ಅರ್ಜುನ್ ಪಟಿಯಾಲಾ’ ಎಂಬ ಸಿನಿಮಾದಲ್ಲಿ ಸನ್ನಿ ಲಿಯೋನ್ ಮೊಬೈಲ್ ನಂಬರ್ ವೊಂದನ್ನು ಹೇಳುತ್ತಾರೆ. ಫಿಲ್ಮ್ ನೋಡಿದ ಮಂದಿ ಅದು ಸನ್ನಿ ನಂಬರ್ ಎಂದು ಒಂದೇ ಸಮನೇ ಕಾಲ್ ಮಾಡುತ್ತಿದ್ದಾರಂತೆ! 

ಆದರೆ ಆ ನಂಬರ್ ದೆಹಲಿ ಮೂಲದ ಪುನೀತ್ ಅಗರ್ ವಾಲ್ ಎಂಬುವವರದ್ದಾಗಿದೆ. ಇವರಿಗೂ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ಕಾಲ್ ಗಳಿಂದ ಬೇಸತ್ತ ಪೊಲೀಸ್ ದೂರು ನೀಡಿದ್ದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. 

ಕಮಲಿ ಧಾರಾವಾಹಿ ಅಹಂಕಾರಿ ಅನಿಕಾಳ ಮತ್ತೊಂದು ಮುಖವಿದು!

ಅರ್ಜುನ್ ಪಟಿಯಾಲಾ ಸಿನಿಮಾದಲ್ಲಿ ಸನ್ನಿ ಲಿಯೋನ್, ದಿಲ್ಜಿತ್ ದೋಸಂಗ್  ಹಾಗೂ ಕೃತಿ ಸನೂನ್ ನಟಿಸಿದ್ದಾರೆ. ಜುಲೈ 26 ರಂದು ಅರ್ಜುನ್ ಪಟಿಯಾಲಾ ಸಿನಿಮಾ ರಿಲೀಸ್ ಆಗಿದೆ. ಅದರಲ್ಲಿ ಸನ್ನಿ ಹೇಳಿದ ಮೊಬೈಲ್ ನಂಬರ್ ನಿಂದಾಗಿ ಪುನೀತ್ ಫಜೀತಿಗೆ ಸಿಲುಕಿದ್ದಾರೆ.