ಒಂದು ಕಡೆ  ಮದುವೆಯಾಗಿದ್ದರೂ ದೀಪಿಕಾಗೆ ತನ್ನ ಹಳೆಯ ಲವ್ವರ್ ರಣ್ಬೀರ್ ಕಪೂರ್ ನನ್ನು ಮರೆಮಾಚಲು ತುಂಬಾ ದಿನಗಳು ಬೇಕಾಗಿದೆ. ಏನಪ್ಪಾ ಇದು ಕತೆ ದೀಪಿಕಾ-ರಣ್‌ ವೀರ್ ನಡುವೆ ರಣ್ ಬೀರ್ ಕಪೂರ್ ಎಲ್ಲಿಂದ ಬಂದ ಅಂತಾ ಇದ್ದೀರಾ? ಇಲ್ಲಿದೆ ಪೂರ್ಣ ಕತೆ.

ಬೆಂಗಳೂರಿಗೆ ಹೊಸ ಜೋಡಿ ಆಗಮಿಸಿದೆ. ದೀಪಿಕಾ ಕುತ್ತಿಗೆಯಲ್ಲಿದ್ದ ಆರ್‌ಕೆ ಟ್ಯಾಟೂ ಮಾತ್ರ ಮಾಯವಾಗಿದೆ. ರಣ್ ಬೀರ್ ಕಪೂರ್ ನೊಂದಿಗೆ ಡೇಟಿಂಗ್ ಮಾಡುತ್ತಿದ್ದ ವೇಳೆ ನವೀನ ಡಿಸೈನ್ ನಲ್ಲಿ ಆರ್ ಕೆ ಎಂದು ದೀಪಿಕಾ ಟ್ಯಾಟೂ ಹಾಕಿಸಿಕೊಂಡಿದ್ದರು.

Add Asianetnews Kannada as a Preferred SourcegooglePreferred

ಇತ್ತ ರಣ್ ವೀರ್ ಸಿಂಗ್ ರೊಂದಿಗೆ ಸಂಬಂಧ ಶುರು ಆದ ಮೇಲೆ ಆರ್‌ ಕೆ ಎರಡಕ್ಷರ ಬಿಟ್ಟು ಉಳಿದವನ್ನು ತೆಗೆಸಿದ್ದರು. ಈಗ ಲೇಸರ್ ಚಿಕಿತ್ಸೆ ಮಾಡಿಸಿಕೊಂಡು ಆರ್ ಕೆ ಗೂ ದೀಪಿಕಾ ಮುಕ್ತಿ ಕಾಣಿಸಿದ್ದಾರೆ.

ಬೆಂಗಳೂರು ಲೀಲಾಪ್ಯಾಲೇಸ್‌ನಲ್ಲೇ ದೀಪಿಕಾ ರಿಸೆಪ್ಷನ್‌, ಸ್ಥಳ ಆಯ್ಕೆಗಿದೆ ವಿಶೇಷ ಕಾರಣ!

ನವೆಂಬರ್ 21 ರಂದು ಬೆಂಗಳೂರಲ್ಲಿ ಆರತಕ್ಷತೆ ನಡೆಯಲಿದೆ. ಮುಂಬೈನಲ್ಲೂ ಸ್ನೇಹಿತರು, ಚಿತ್ರತಾರೆಯರಿಗೆ ರಿಸೆಪ್ಷನ್ ನಡೆಯಲಿದೆ. ಬಾಜಿರಾವ್‌ ಮಸ್ತಾನಿ, ರಾಮ್‌ ಲೀಲಾ, ಪದ್ಮಾವತ್‌ ಸೇರಿದಂತೆ ಹಲವು ಸೂಪರ್‌ಹಿಟ್‌ ಚಿತ್ರಗಳನ್ನು ನೀಡಿದ ಈ ಜೋಡಿ ಹಸೆಮಣೆ ಏರಿದ್ದು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು.