ಬಾಲಿವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮ.  ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ -ರಣ್ವೀರ್ ಸಿಂಗ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇಟಲಿಯ ಸರೋವರ ತೀರದಲ್ಲಿ ಈ ಸ್ಟಾರ್ ಜೋಡಿ ಸಪ್ತಪದಿ ತುಳಿದಿದೆ. ಅದ್ದೂರಿ ಕಲ್ಯಾಣಕ್ಕೆ ಆಪ್ತರು, ಸಂಬಂಧಿಕರಷ್ಟೆ ಸಾಕ್ಷಿಯಾಗಿದ್ದಾರೆ. ಎಷ್ಟೆ ಬಿಗಿ ಭದ್ರತೆ ಇಟ್ಟಿದ್ದರೂ ಜೋಡಿಯ ಮದುವೆ ಫೋಟೋ ಲೀಕ್ ಆಗಿದೆ.

ಕನ್ನಡತಿ, ಕರಾವಳಿ ಬಾಲೆ ದೀಪಿಕಾ ಪಡುಕೋಣೆ.. ಪಂಜಾಬಿ ಹೀರೋ ರಣ್ವೀರ್ ಸಿಂಗ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಸುಮಾರು 5 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ದಾಂಪತ್ಯಕ್ಕೆ ಕಾಲಿರಿಸಿದೆ. ಇವತ್ತು ಕೊಂಕಣಿ ಸಂಪ್ರದಾಯದಂತೆ ಮದುವೆ ನಡೆದಿದೆ. ಗುರುವಾರ ಸಿಂಧಿ ಶಾಸ್ತ್ರದಂತೆ ಕಲ್ಯಾಣ ನಡೆಯಲಿದೆ. ಇನ್ನೂ 3 ದಿನ ಮದುವೆ ಸಂಭ್ರಮ ಕಳೆಗಟ್ಟಲಿದೆ. ಆದರೆ ಮದುವೆ ಫೋಟೋ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ನವೆಂಬರ್ 21 ರಂದು ಬೆಂಗಳೂರಲ್ಲಿ ಆರತಕ್ಷತೆ ನಡೆಯಲಿದೆ. ಮುಂಬೈನಲ್ಲೂ ಸ್ನೇಹಿತರು, ಚಿತ್ರತಾರೆಯರಿಗೆ ರಿಸೆಪ್ಷನ್ ನಡೆಯಲಿದೆ. ಬಾಜಿರಾವ್‌ ಮಸ್ತಾನಿ, ರಾಮ್‌ ಲೀಲಾ, ಪದ್ಮಾವತ್‌ ಸೇರಿದಂತೆ ಹಲವು ಸೂಪರ್‌ಹಿಟ್‌ ಚಿತ್ರಗಳನ್ನು ನೀಡಿದ ಈ ಜೋಡಿ ಹಸೆಮಣೆ ಏರಿದ್ದು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

View post on Instagram
View post on Instagram
View post on Instagram

ಇಟಲಿಯಲ್ಲಿ ದೀಪಿಕಾ, ರಣವೀರ್‌ ಮದ್ವೆ : ಹೇಗಿರುತ್ತೆ ರಾಯಲ್ ವೆಡ್ಡಿಂಗ್..

ಡಿಪ್ಪಿ-ವೀರ್ ಮದುವೆಗೆ ಸ್ಯಾಂಡಲ್‌ವುಡ್ ಏಕೈಕ ನಿರ್ದೇಶಕನಿಗೆ ಮಾತ್ರ ಆಹ್ವಾನ

ಹಸೆಮಣೆ ಏರುವ ಮುನ್ನ ಪೂಜೆಯಲ್ಲಿ ಭಾಗಿಯಾದ ದೀಪಿಕಾ ಪಡುಕೋಣೆ