ಏರ್‌ಪೋರ್ಟ್‌ನಲ್ಲಿ ಖುಲ್ಲಂಖುಲ್ಲಾಗಿ ದೀಪಿಕಾ-ರಣವೀರ್ ಕಿಸ್!

First Published 3, Aug 2018, 4:13 PM IST
Deepika Padukone, Ranveer Singh kiss at the airport
Highlights

ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಒಟ್ಟಿಗೆ ಸುತ್ತಾಡುವುದು, ಡೇಟಿಂಗ್ ನಡೆಸುವುದು ಗುಟ್ಟಾಗೇನು ಉಳಿದಿಲ್ಲ. ಇವರಿಬ್ಬರು ಮುಂಬೈ ಏರ್‌ಪೋರ್ಟ್‌ಲ್ಲಿ ಸಾರ್ವಜನಿಕವಾಗಿ ಮುತ್ತು ಕೊಟ್ಟಿದ್ದಾರೆ. 

ಮುಂಬೈ(ಆ. 03): ದೀಪಿಕಾ ಪಡುಕೋಣೆ-ರಣವೀರ್ ಸಂಬಂಧದ ಬಗ್ಗೆ ಅನುಮಾನಗಳಿದ್ದರೆ ಅದಕ್ಕೆ ಉತ್ತರ ಕೊಡಲಿದೆ ಈ ವಿಡಿಯೋ. ತಮ್ಮ ಸಂಬಂಧದ ಬಗ್ಗೆ ಮಾತನಾಡಲು ಹಿಂದೆ ಸರಿಯುತ್ತಿದ್ದ ಓ ಜೋಡಿ ಈ ಬಿಂದಾಸ್ ಆಗಿ ಉತ್ತರ ಕೊಟ್ಟಿದೆ. 

ವಿದೇಶದಲ್ಲಿ ಈ ಲವ್ ಬರ್ಡ್ಸ್’ಗಳು ಕೈ ಕೈ ಹಿಡಿದು ಸುತ್ತಾಡಿದ್ದಾರೆ. ಗುರುವಾರ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಈ ಜೋಡಿ ರೊಮ್ಯಾಂಟಿಕ್ ಆಗಿ ಬೀಳ್ಕೊಂಡಿದ್ದಾರೆ. ದೀಪಿಕಾಳನ್ನು ಕಾರಿನ ಬಳಿ ಬಿಡಲು ಹೋದ ರಣಬೀರ್ ದೀಪಿಕಾ ಕಾರಲ್ಲಿ ಕುಳಿತ ಕೂಡಲೇ ಒಬ್ಬರಿಗೊಬ್ಬರು ಕಿಸ್ ಕೊಟ್ಟುಕೊಂಡಿದ್ದಾರೆ. 

 

ದೀಪಿಕಾ-ರಣಬೀರ್ ಬಾಲಿವುಡ್ ಕ್ಯೂಟ್ ಕಪಲ್. ಇವರಿಬ್ಬರು ಒಟ್ಟಿಗೆ ಸುತ್ತಾಡುತ್ತಿರುವುದು ಗುಟ್ಟಾಗೇನು ಉಳಿದಿಲ್ಲ. ಆದರೆ ತಮ್ಮ ಸಂಬಂಧದ ಬಗ್ಗೆ ಇಬ್ಬರೂ ಬಾಯಿ ಬಿಡುತ್ತಿಲ್ಲ. ಮದುವೆ ಬಗ್ಗೆಯಂತೂ ಕೇಳುವುದೇ ಬೇಡ. 

ಒಟ್ಟಿನಲ್ಲಿ ದೀಪಿಕಾ -ರಣಬೀರ್ ಸಾರ್ವಜನಿಕವಾಗಿ ಕಿಸ್ ಕೊಟ್ಟಿದ್ದು ಅವರಿಬ್ಬರ ಸಂಬಂಧವನ್ನು ಇನ್ನಷ್ಟು ಹತ್ತಿರವಾಗಿಸಿದ್ದಂತೂ ಸುಳ್ಳಲ್ಲ. 

loader