ಸ್ತನದ ಗಾತ್ರ ಹೆಚ್ಚಿಸಿಕೊಳ್ಳುವಂತೆ ಈ ನಟಿಗೆ ಸಲಹೆ ನೀಡಿದ್ಯಾರು?

Deepika Padukone: I was advised to get a boob job
Highlights

ಸ್ತನಗಳ ಗಾತ್ರ ಹೆಚ್ಚಳಕ್ಕೆ ದೀಪಿಕಾಗೆ ಸಲಹೆ

ಕಾಸ್ಟಿಂಗ್ ಕೌಚ್ ಕರಾಳ ಸತ್ಯ ಬಿಚ್ಚಿಟ್ಟ ನಟಿ

ಸ್ತನಗಳ ಗಾತ್ರ ಹೆಚ್ಚಿಸಿದರೆ ಫೇಮಸ್ ಆಗ್ತಾರಂತೆ

ಮುಂಬೈ(ಜೂ.29): ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೀಪಿಕಾ ಪಡುಕೋಣೆ, ಚಿತ್ರರಂಗ ಪ್ರವೇಶಿಸುವಾಗ ಸ್ತನಗಳ ಗಾತ್ರವನ್ನು ಹೆಚ್ಚಿಸಿಕೊಳ್ಳುವಂತೆ ತಮಗೆ ಸಲಹೆ ನೀಡಿದ್ದರು ಎಂಬ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ. 

10 ವರ್ಷಗಳ ಹಿಂದೆ ಚಿತ್ರಕ್ಕಾಗಿ ಆಡಿಷನ್ ನಡೆಯುತ್ತಿತ್ತು ಈ ವೇಳೆ ನನಗೆ ಹಲವರು ತಮ್ಮ ಸ್ತನಗಳ ಗಾತ್ರವನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಸೌಂದರ್ಯವಾಗಿ ಕಾಣುವುದಕ್ಕಾಗಿ ಸ್ತನಗಳ ಪಾತ್ರವೂ ಮುಖ್ಯ ಎಂದು ಹೇಳಿದ್ದರು ಎಂದು ದೀಪಿಕಾ ಹೇಳಿದ್ದಾರೆ. 

ನಾನು ಕಲೆಯನ್ನು ನಂಬಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದೆ, ಇಂದು ನನ್ನ ಛಲ ಮತ್ತು ಪರಿಶ್ರಮದಿಂದ ಈ ಸ್ಥಾನದಲ್ಲಿದ್ದೇನೆ ಎಂದು ಸಂದರ್ಶನವೊಂದರಲ್ಲಿ ದೀಪಿಕಾ ಪಡುಕೋಣೆ ಹೇಳಿದ್ದಾರೆ. ದೀಪಿಕಾ ಪಡುಕೋಣೆ ಅವರು ಬಾಲಿವುಡ್ ನಟ ಶಾರುಕ್ ಖಾನ್ ಅಭಿನಯದ ಓಂ ಶಾಂತಿ ಓಂ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದರು. ನಂತರ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

loader