ಕೊನೆಗೂ ಮೌನ ಮುರಿದ ನಟಿ ದೀಪಿಕಾ ಪಡುಕೋಣೆ

Deepika Padukone breaks silence
Highlights

ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ಈ  ವಿಚಾರದ ಬಗ್ಗೆ ಕೊನೆಗೂ ತಮ್ಮ ಮೌನ ಮುರಿದು ಮಾತನಾಡಿದ್ದಾರೆ. ಮನಬಿಚ್ಚಿ ಮಾತನಾಡಿದ ದೀಪಿಕಾ ತಮ್ಮ ವಿವಾಹದ ಬಗ್ಗೆ ಮಾತನಾಡಿದ್ದಾರೆ. 

ನವದೆಹಲಿ: ಬಾಲಿವುಡ್‌ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ನಡುವೆ ಮದುವೆ ನಿಶ್ಚಿತಾರ್ಥವಾಗಿದೆ ಎಂದು ಇತ್ತೀಚೆಗೆ ಸಾಕಷ್ಟುವದಂತಿಗಳು ಹಬ್ಬಿದ್ದವು. 

ಆದರೆ, ಈಗ ಸಂದರ್ಶನವೊಂದರಲ್ಲಿ ಮಾತನಾಡಿರುವ ದೀಪಿಕಾ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸಾಧ್ಯವಾದಷ್ಟು, ಇಂತದ್ದನ್ನೆಲ್ಲ ಪ್ರತ್ಯೇಕವಾಗಿಡಲು ಪ್ರಯತ್ನಿಸುತ್ತೇನೆ. 

ಆದರೆ, ಸಂದೇಹಗಳನ್ನು ನಿಯಂತ್ರಿಸಲು ಅಥವಾ ಅದರ ವಿರುದ್ಧ ಹೋರಾಡಲು ಪ್ರಯತ್ನಿಸುವುದಿಲ್ಲ ಎಂದು ದೀಪಿಕಾ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದ್ದಾರೆ. ವಿವಾಹಿತ ಜೋಡಿಗಳ ವಿಷಯದಲ್ಲಿ ತಮ್ಮ ಹೆತ್ತವರೇ ಅತ್ಯದ್ಭುತ ಮಾದರಿ. ತಮಗೂ ಕುಟುಂಬ ಹೊಂದುವ ಇಚ್ಛೆಯಿದೆ ಮತ್ತು ಮಗು ಆಗಬೇಕೆಂಬ ಬಯಕೆಯೂ ಇದೆ ಎಂದು ಮನಬಿಚ್ಚಿ ಮಾತನಾಡಿದ್ದಾರೆ.

loader