ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ಇಬ್ಬರ ಮದುವೆಯೂ ಫಿಕ್ಸ್ ಆಗಿರೋದ್ರಿಂದ ಏನೇನಾಗಿದೆ ಗೊತ್ತಾ!

ಗೊತ್ತಿಲ್ಲದಿದ್ದರೆ ಕೇಳಿ, ಮದುವೆ ಫಿಕ್ಸ್ ಆಗಿ ಅವರು ಬಾಯ್‌ಫ್ರೆಂಡ್‌ಗಳೊಂದಿಗೆ ಬ್ಯುಸಿಯಾಗುತ್ತಲೇ ಜೇಬಿಗೆ ಕತ್ತರಿ ಬಿದ್ದಿದೆ. ಅರೆ ಸಂಗಾತಿಯಾಗುವವರೊಂದಿಗೆ ಸುತ್ತಾಡಿದರೆ ಅವರ ಜೇಬು ಖಾಲಿಯಾಗದೇ ಈ ಚೆಲುವೆಯರ ಪಾಕೆಟ್ ಯಾಕೆ ಖಾಲಿಯಾಗುತ್ತೆ? ಆದ ಖರ್ಚನ್ನೆಲ್ಲಾ ಇವರೇ ಭರಿಸಿದರೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಯಾಕೆ ಅಂತೀರಾ? ಈ ಇಬ್ಬರು ಚೆಲುವೆಯರ ಸಂಭಾವನೆ ಈ ವರ್ಷ ಕಡಿಮೆಯಾಗಿದೆ. ಇದು ಯಾರೋ ಐಟಿ ಇಲಾಖೆಯವರು ಕೊಟ್ಟ ಮಾಹಿತಿಯಲ್ಲ, ಬದಲಿಗೆ ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿರುವ 2018ರ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಇವರ ಹೆಸರು ಮಿಸ್ ಆಗಿರುವುದು. ಕಳೆದ ವರ್ಷವಷ್ಟೇ ಟಾಪ್ 10ನಲ್ಲಿ ಇದ್ದ ಇವರ ಹೆಸರು ಈಗ ಮಾಯ. ನಿಜವಾಗಿಯೂ ಮಹಾ ಮಾಯಾ ಅಲ್ಲವೇ ಇದು. ಇನ್ನು ಮೊದಲ ಸ್ಥಾನ ಅಮೆರಿಕಾದ ಸ್ಕಾರ್ಲೆಟ್ ಜಾನ್ಸನ್ ಪಾಲಾಗಿದ್ದರೆ, ನಮ್ಮ ದೇಶದ ಯಾವುದೇ ನಟಿಯೂ ಟಾಪ್ 10ನಲ್ಲಿ ಇಲ್ಲವೇ ಇಲ್ಲ.