ಮುಂಬೈ (ನ.27): ಶಾರೂಖ್ ಖಾನ್ ಹಾಗು ಆಲಿಯಾ ಭಟ್ ಇದೇ ಮೊದಲ ಬಾರಿ ಸ್ಕ್ರೀನ್‌ ಮೇಲೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ಡಿಯರ್ ಜಿಂದಗಿ ಸಿನಿಮಾ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಾಕ್ಸ್ ಆಫೀಸ್’ನಲ್ಲಿ ಡಿಯರ್ ಜಿಂದಗಿ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡುತ್ತಿದೆ.

ಭಾರತದಲ್ಲಿ ಒಟ್ಟು 1200 ಸ್ಕ್ರೀನ್‌ಗಳಲ್ಲಿ ರಿಲೀಸ್‌ ಆಗಿರುವ ಡಿಯರ್‌ ಜಿಂದಗಿ ಮೊದಲ ದಿನವೇ 8.75 ಕೋಟಿ ಗಳಿಕೆ ಕಂಡಿದೆಯಂತೆ.

ಇನ್ನು ವಿದೇಶಗಳಲ್ಲಿಯೂ ಈ ಚಿತ್ರ ರಿಲೀಸ್‌ ಆಗಿದ್ದು, ಉತ್ತರ ಅಮೆರಿಕದಲ್ಲಿ  ಬುಧವಾರವೇ ರಿಲೀಸ್‌ ಆಗಿದೆ. ಇಲ್ಲೂ 2.87 ಕೋಟಿ ಕಲೆಕ್ಷನ್‌ ಮಾಡಿದೆ ಎಂದು ಹೇಳಲಾಗ್ತಿದೆ.

ಸತತ ಎರಡು ಚಿತ್ರಗಳ ಸೋಲಿನಿಂದ ಕಂಗೆಟ್ಟಿದ್ದ ಶಾರೂಖ್‌ಗೆ ಡಿಯರ್‌ ಜಿಂದಗಿ ಚಿತ್ರ ತಕ್ಕಮಟ್ಟಿಗೆ ಸಮಾಧಾನ ನೀಡಿದೆ.