'ಡಿಯರ್ ಕಾಮ್ರೆಡ್'ನ ಮುದ್ದಿನ ಲಿಲ್ಲಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗವನ್ನು ರೂಲ್ ಮಾಡುತ್ತಿದ್ದಾರೆ ಅಂದರೆ ತಪ್ಪಾಗದು. ತನ್ನ ಮುಂಬರುವ ಸಿನಿಮಾಗಳ ಕಾಲ್‌ ಶೀಟನ್ನು ಸ್ಟಾರ್ ನಟರಿಗೆ ಮಾತ್ರ ಮೀಸಲಿಟ್ಟಿದ್ದಾರೆ ಎಂಬ ಆರೋಪವೂ ಇದೆ.

ರಶ್ಮಿಕಾ ಮೇಲೆ ಕಾಲಿಟ್ಟು ಉದ್ಧಟತನ ತೋರಿಸಿದ ವಿಜಯ್ ದೇವರಕೊಂಡ!

ವಿವಾದಗಳಲ್ಲಿ ಮುಳುಗಿ ಹೋಗಿರುವ ರಶ್ಮಿಕಾ ಮಂದಣ್ಣ ತಮಿಳು ನಟ ಕಾರ್ತಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೀಗ ಚಿತ್ರಕ್ಕೆ 'ಸುಲ್ತಾನ್' ಎಂದು ಟೈಟಲ್ ಫಿಕ್ಸ್‌ ಆಗಿದ್ದು ಸ್ವತಃ ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದಾರೆ.

'ರಶ್ಮಿಕಾ'ನ ನೀವೇ ಇಟ್ಕೋಳಿ ' ಕಾಶ್ಮೀರ' ನಮ್ಗೆ ಕೊಡಿ!

 

‘ಡಿಯರ್ ಕಾಮ್ರೆಡ್‌’ ಚಿತ್ರ ರಿಲೀಸ್‌ ನಂತರ ರಶ್ಮಿಕಾಗೆ ಸಾಕಷ್ಟು ಆಫರ್‌ಗಳು ಹರಿದು ಬರುತ್ತಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಹರಿದಾಡುತ್ತಿರುವ ವಿಚಾರಗಳಿಗೆ ಕೇರ್ ಮಾಡದೇ ರಶ್ಮಿಕಾ ಪಾಸಿಟಿವ್ ಕಮೆಂಟ್ ಹಾಗೂ ಅಭಿಮಾನಿಗಳ ವಿಶ್‌ಗಳಿಗೆ ಮಾತ್ರ ಸ್ಪಂದಿಸುತ್ತಿದ್ದಾರೆ.