ಎರಡು ಭಾಷೆ, ಮೂರು ರಾಜ್ಯ

‘ಐ ಲವ್‌ಯು’ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿರುವ ಚಿತ್ರ. ಉಪೇಂದ್ರ ಅವರ ಬಹುತೇಕ ಸಿನಿಮಾಗಳು ತೆಲುಗಿಗೆ ಡಬ್‌ ಹಾಗೂ ರೀಮೇಕ್‌ ಆಗಿವೆ. ನೇರವಾಗಿ ಎರಡು ಭಾಷೆಗಳಲ್ಲಿ ತಯಾರಿಸಿರುವ ‘ಐ ಲವ್‌ಯು’ ಚಿತ್ರಕ್ಕೆ ಟಾಲಿವುಡ್‌ನಲ್ಲೂ ದೊಡ್ಡ ಕ್ರೇಜ್‌ ಹುಟ್ಟಿಕೊಂಡಿದೆ. ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ- ಏಕಕಾಲಕ್ಕೆ ಮೂರು ರಾಜ್ಯಗಳಲ್ಲಿ ಉಪೇಂದ್ರ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಮಾಡುವುದಕ್ಕೆ ನಿರ್ದೇಶಕ ಚಂದ್ರ ಹೊರಟಿದ್ದಾರೆ.

ಉಪೇಂದ್ರಗೆ ’ಐ ಲವ್ ಯೂ’ ಅಂತಾರೆ ಕಿಚ್ಚ ಸುದೀಪ್ !

ಸಿನಿಮಾ ವಿತರಣೆಗೆ ಭಾರೀ ಬೇಡಿಕೆ ಬಂದಿದೆ. ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಜೂನ್‌ 14 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಕನ್ನಡದಂತೆ ತೆಲುಗಿನಲ್ಲೂ ಆಡಿಯೋ ಹಾಗೂ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಗಿದೆ. ತೆಲುಗಿನಲ್ಲೂ ಉಪೇಂದ್ರ ಅವರ ಅಭಿಮಾನಿಗಳು ಇದ್ದಾರೆ. ಎರಡು ವರ್ಷಗಳ ನಂತರ ಅವರ ಸಿನಿಮಾ ಬರುತ್ತಿದೆ. ಸಹಜವಾಗಿ ‘ಐಲವ್‌ಯು’ ಚಿತ್ರದ ಮೇಲೆ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿವೆ.- ಆರ್‌ ಚಂದ್ರು, ನಿರ್ದೇಶಕ

ಅದ್ದೂರಿ ತಾರಾಗಣ, ಉಪ್ಪಿ ಸ್ಟೈಲಿನ ಸಿನಿಮಾ

ಉಪ್ಪಿಗೆ ರಚಿತಾ ರಾಮ್‌ ಹಾಗೂ ಸೋನು ಗೌಡ ನಾಯಕಿಯರು. ಈಗಾಗಲೇ ಹಾಡು ಮತ್ತು ಟ್ರೇಲರ್‌ ಬಿಡುಗಡೆ ಆಗಿದ್ದು, ಒಳ್ಳೆಯ ರೆಸ್ಪಾನ್ಸ್‌ ಬರುತ್ತಿದೆ. ಕನ್ನಡ ಮತ್ತು ತೆಲುಗು ಭಾಷೆಗೆ ಪರಿಚಿತವಾಗಿರುವ ಕಲಾವಿದರನ್ನೇ ಹಾಕಿಕೊಳ್ಳಲಾಗಿದೆ. ಇನ್ನೂ ಈ ಚಿತ್ರ ಪಕ್ಕಾ ಉಪ್ಪಿ ಸ್ಟೈಲಿನ ಮಾಸ್‌ ಮತ್ತು ಕಮರ್ಷಿಯಲ್‌ ಸಿನಿಮಾ. ಪ್ರೀತಿ, ಪ್ರೇಮ ಪುಸ್ತಕದ ಬದನೆಕಾಯಿ ಎಂದ ಉಪೇಂದ್ರ ಅವರೇ ‘ಐಲವ್‌ಯು’ ಎನ್ನುವ ಕತೆಯನ್ನು ನಿರ್ದೇಶಕರು ಹೇಳಿದ್ದಾರೆ.