ಹರಿಪ್ರಿಯಾ- ಸುಮಲತಾ ಅಂಬರೀಶ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಮೇ 24 ರಂದು ರಿಲೀಸ್ ಆಗುತ್ತಿದೆ. ಸುಮಲತಾ ಅಮ್ಮನಾಗಿ ಹರಿಪ್ರಿಯಾ ಮಗಳಾಗಿ ಕಾಣಿಸಿಕೊಂಡಿರುವ ಕ್ರೈಂ ಥ್ರಿಲ್ಲರ್ ಚಿತ್ರ ಇದಾಗಿದ್ದು ರಿಲೀಸ್ ಗೂ ಮುನ್ನ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಅಭಿಮಾನಿಗಳಿಗೆ ಶ್ರಿಯಾ ಶಾಕ್, ಸ್ವಿಮ್ ಸೂಟ್ ನಲ್ಲಿ ಬಿಂದಾಸ್ ಸ್ಟೆಪ್ಸ್

ಚಿತ್ರತಂಡ ಡಿಫರೆಂಟಾಗಿ ಪ್ರಚಾರದಲ್ಲಿ ತೊಡಗಿದೆ. ಅಮ್ಮ- ಮಗಳ ಸೆಲ್ಫಿ ಸ್ಪರ್ಧೆಯನ್ನು ಏರ್ಪಡಿಸಿದೆ. ನಿಮ್ಮ ತಾಯಿಯ ಜೊತೆ ಸೆಲ್ಫಿ ತೆಗೆದು 7411157888 ಗೆ ವಾಟ್ಸಾಪ್ ಮಾಡಿ ವಿಶೇಷ ಬಹುಮಾನ ಗೆಲ್ಲಿ ಎಂದು ಚಿತ್ರತಂಡ ಹೇಳಿದೆ. 

 

ಕ್ರೈಮ್‌, ಥ್ರಿಲ್ಲರ್‌ ಹಾಗೂ ತನಿಖೆಯ ಅಂಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಶಂಕರ್‌ ಜೆ ಎಂಬುವವರು ನಿರ್ದೇಶಕರು. ಇವರೇ ಕತೆ, ಚಿತ್ರಕತೆ ಬರೆದಿರುವುದು. ಸಂಗೀತ ನಿರ್ದೇಶಕ ಮಿಥುನ್‌ ಮುಕುಂದನ್‌, ಶಶಿಧರ್‌ ಕೆ., ಜಯಲಕ್ಷೀಕೃಷ್ಣಗೌಡ, ಸಂದೀಪ್‌ ಶಿವಮೊಗ್ಗ ಮತ್ತು ಶ್ವೇತಮಧುಸೂಧನ್‌ ಚಿತ್ರದ ನಿರ್ಮಾಪಕರು. ವಿಜಯ್‌ ಸಿನಿಮಾಸ್‌ ಮುಖಾಂತರ ಸುಮಾರು 150 ಕೇಂದ್ರಗಳಲ್ಲಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.