ಬೆಂಗಳೂರು[ಆ. 20] ತಮಿಳು ಚಿತ್ರವೊಂದರ ತಂಡ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕೆಂಡಾಮಂಡಲವಾಗಿದೆ. ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ ನಂತರ ತೆಲುಗು ತಮಿಳಿನ ಕಡೆ ಮುಖ ಮಾಡಿ ಬ್ಯುಸಿಯಾಗಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ರಶ್ಮಿಕಾ ಹಾಕಿಕೊಂಡಿರುವ ಸ್ಟೇಟಸ್ ಚಿತ್ರತಂಡ ಆಕೆಯ ವಿರುದ್ಧ ತಿರುಗಿಬೀಳಲು ಕಾರಣ. ಅಷ್ಟಕ್ಕೂ ರಶ್ಮಿಕಾ ಮಾಡಿದ ತಪ್ಪೇನು?

ರಶ್ಮಿಕಾ ಮೇಲೆ ಕಾಲಿಟ್ಟು ಉದ್ಧಟತನ ತೋರಿಸಿದ ವಿಜಯ್ ದೇವರಕೊಂಡ!

 ವಿಜಯ್ ದೇವರಕೊಂಡ ಜತೆಗೆ ಅಭಿನಯಿಸಿರುವ 'ಡಿಯರ್ ಕಾಮ್ರೇಡ್' ಗಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸುದ್ದಿ ಮಾಡಿದ್ದ ರಶ್ಮಿಕಾ ಈ ಬಾರಿ ಚಿತ್ರತಂಡದ ಅನುಮತಿ ಇಲ್ಲದೇ ಚಿತ್ರದ ಹೆಸರನ್ನು ಬಹಿರಂಗಮಾಡಿದ್ದಾರೆ ಎನ್ನುವುದು ಸುದ್ದಿ.

ಕಾಲಿವುಡ್‌ನಲ್ಲಿ ಕಾರ್ತಿ ಜತೆಗೆ ರಶ್ಮಿಕಾ ನಟಿಸುತ್ತಿದ್ದು ಈ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್‌ನ್ನು ಭರ್ಜರಿಯಾಗಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತಂತೆ. ಆದರೆ ರಶ್ಮಿಕಾ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಸುಲ್ತಾನ್ ಚಿತ್ರೀಕರಣದಲ್ಲಿ ಬ್ಯುಸಿ ಇದ್ದೇನೆ ಎಂದು ಬರೆದುಕೊಂಡಿರುವುದಕ್ಕೆ ಕಾರ್ತಿ ಆದಿಯಾಗಿ ಚಿತ್ರತಂಡಕ್ಕೆ ಅಸಮಾಧಾನವಾಗಿದೆ ಎಂಬುದು ಕಾಲಿವುಡ್ ನಿಂದ ಬಂದಿರುವ ಸುದ್ದಿ.