ಭದ್ರಾವತಿಯ ಬೆಡಗಿ ಆಶಾ ಭಟ್‌ ಬಾಲಿವುಡ್‌ನಿಂದ ಸೀದಾ ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಡುತ್ತಿದ್ದಾರೆ. ಅದೂ ದೊಡ್ಡ ಪ್ರೊಡಕ್ಷನ್‌ ಹೌಸ್‌, ದೊಡ್ಡ ಡೈರೆಕ್ಟರ್‌, ದೊಡ್ಡ ಸ್ಟಾರ್‌ ಸಿನಿಮಾವಾದ ‘ರಾಬರ್ಟ್‌’ ಮೂಲಕ. ಮೊದಲ ಪ್ರಯತ್ನದಲ್ಲಿಯೇ ಸಿಕ್ಸರ್‌ ಬಾರಿಸಲು ಸಿದ್ಧವಾಗಿರುವ ಆಶಾ ಭಟ್‌ ತನಗೆ ಒಲಿದು ಬಂದ ಅವಕಾಶ, ಪಾತ್ರಕ್ಕೆ ಮಾಡಿಕೊಂಡಿರುವ ಸಿದ್ಧತೆ ಜೊತೆಗೆ ತಮ್ಮ ಹಿನ್ನೆಲೆಯನ್ನೊಂದಿಷ್ಟು ಇಲ್ಲಿ ಹೇಳಿಕೊಂಡಿದ್ದಾರೆ.

ರಾಬರ್ಟ್‌ ಅವಕಾಶ ಒಲಿದು ಬಂದಿದ್ದು ಹೇಗೆ?

2017ರಲ್ಲಿ ‘ಜಂಗ್ಲಿ’ ಸಿನಿಮಾದಲ್ಲಿ ಅವಕಾಶ ಬಂದಿತ್ತು. ಅದರಲ್ಲಿ ಮೇನ್‌ ರೋಲ್‌ ಮಾಡಿದ್ದೆ. ಅದನ್ನು ನೋಡಿದ ತರುಣ್‌ ಸರ್‌, ನನ್ನ ನಟನೆ ಮೆಚ್ಚಿ ಕಾಲ್‌ ಮಾಡಿ ‘ರಾಬರ್ಟ್‌’ ಅವಕಾಶ ನೀಡಿದರು. ಅವರು ಈ ಅವಕಾಶವನ್ನು ನನ್ನ ಮುಂದಿಟ್ಟತಕ್ಷಣ ನಾನು ಒಪ್ಪಿಕೊಂಡೆ. ಕನ್ನಡ ನನ್ನ ಮಾತೃಭಾಷೆ.

ಇಂತಹ ಒಂದು ಸುವರ್ಣ ಅವಕಾಶ ತಾನಾಗಿಯೆ ಒಲಿದು ಬಂದಾಗ ಯಾರೂ ಬಿಡುವುದಿಲ್ಲ. ಹಾಗೆಯೇ ನಾನು ಹಿಂದೆ ಮುಂದೆ ನೋಡದೆ ಒಪ್ಪಿಕೊಂಡೆ. ತರುಣ್‌ ಸರ್‌ ಚಿತ್ರದ ಮತ್ತು ಪಾತ್ರದ ಬಗ್ಗೆ ಹೇಳಿದರು. ನನಗೆ ತುಂಬಾ ಇಷ್ಟವಾಯಿತು.

ದರ್ಶನ್ ರಾಬರ್ಟ್‌ಗೆ ಭದ್ರಾವತಿ ಚೆಲುವೆ.. ಎಲ್ಲರಿಗೂ ಗೊತ್ತಿರುವವಳೆ!

ರಾಬರ್ಟ್‌ನಲ್ಲಿ ನಿಮ್ಮ ಪಾತ್ರವೇನು?

ಮೇಲ್‌ ರೋಲ್‌ ಲೀಡ್‌ ಮಾಡುತ್ತಿದ್ದೇನೆ. ಆದರೆ ಪಾತ್ರದ ಬಗ್ಗೆ ಇಗಲೇ ಏನೂ ಹೇಳುವುದಕ್ಕೆ ಆಗುವುದಿಲ್ಲ. ಆದರೆ ದೊಡ್ಡ ಟೀಂ, ದೊಡ್ಡ ಸ್ಟಾರ್‌ ನಟರ ಜೊತೆಗೆ ಕೆಲಸ ಮಾಡುವ ಖುಷಿ ನನಗಿದೆ. ಅದರೊಂದಿಗೆ ಜವಾಬ್ದಾರಿಯೂ ಹೆಚ್ಚಾಗಿದೆ. ಇದಕ್ಕೆ ತಕ್ಕಂತೆ ಒಂದಷ್ಟುತಾಲೀಮುಗಳು ನಡೆಯುತ್ತಿವೆ. ವಯಕ್ತಿಕವಾಗಿ ನನಗೂ ಇದು ತುಂಬಾ ಮಹತ್ವದ ಚಿತ್ರ.

ಚಿತ್ರಕ್ಕಾಗಿ ಏನೆಲ್ಲಾ ತಯಾರಿ ಮಾಡುತ್ತಿದ್ದೀರಿ?

ಸದ್ಯಕ್ಕೆ ಡೈರೆಕ್ಟರ್‌ ಜೊತೆಗೆ ರೀಡಿಂಗ್‌ನಲ್ಲಿ ತೊಡಗಿದ್ದೇನೆ. ಇದೇ ತಿಂಗಳು ಶೂಟಿಂಗ್‌ ಶುರುವಾಗುವುದಿದೆ. ಪಾತ್ರ ನನ್ನಿಂದ ಏನನ್ನು ಬಯಸುತ್ತದೆಯೋ ಅದೆಲ್ಲವನ್ನೂ ನಾನು ಮಾಡಲು ಸಿದ್ಧಳಿದ್ದೇನೆ.

ಬಾಲಿವುಡ್‌ ಅನುಭವ ಹೇಗಿತ್ತು?

‘ಜಂಗ್ಲಿ’ ನಿರ್ದೇಶನ ಮಾಡಿದ್ದು ಹಾಲಿವುಡ್‌ ನಿರ್ದೇಶಕ ಚುಕ್‌ ರುಸೆಲ್‌. ತುಂಬಾ ದೊಡ್ಡ ಟೀಂ ಅದು. ಅವರೊಂದಿಗೆ ಕೆಲಸ ಮಾಡಿದ್ದರಿಂದ ಸಿನಿಮಾ ಬಗ್ಗೆ ತಿಳಿದೇ ಇರದಿದ್ದ ಎಷ್ಟೋ ಸಂಗತಿಗಳು ತಿಳಿದವು. ಒಳ್ಳೆಯ ಕಲಾವಿದರ ಜೊತೆ ಕೆಲಸ ಮಾಡುವ ಅನುಭವವೇ ಬೇರೆ.

ದರ್ಶನ್ ‘ರಾಬರ್ಟ್’ ಚೆಲುವೆ, ಏನ್ ಸಂದಾಗವ್ಳೆ!

ಅದನ್ನು ನಾನು ‘ಜಂಗ್ಲಿ’ ಸಿನಿಮಾದಲ್ಲಿ ಪಡೆದುಕೊಂಡೆ. ಮಾಡೆಲಿಂಗ್‌ ಮಾಡಿಕೊಂಡಿದ್ದ ನನಗೆ ಸಿಕ್ಕ ಈ ಅವಕಾಶ ನನ್ನ ಸಿನಿಮಾ ಜರ್ನಿಗೆ ಒಳ್ಳೆಯ ಅಡಿಪಾಯವನ್ನೇ ಹಾಕಿಕೊಟ್ಟಿದೆ ಎಂದು ನನಗೆ ಅನ್ನಿಸುತ್ತಿದೆ.

ಹಾಗಿದ್ದರೆ ನೀವು ಸಿನಿಮಾಗೆ ಬಂದಿದ್ದು ಆಕಸ್ಮಿಕವೇ?

ಹಾಗೆಂದೇನಿಲ್ಲ. ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆ ಇತ್ತು. ಅದಕ್ಕಾಗಿಯೇ ಪ್ರತಿದಿನ ಆಡಿಷನ್‌ಗೆ ಹೋಗುತ್ತಿದ್ದೆ. ಇದರ ಮಧ್ಯದಲ್ಲಿ ಮ್ಯೂಸಿಕ್‌, ಮಾರ್ಷಲ್‌ ಆಟ್ಸ್‌ರ್‍, ಡ್ಯಾನ್ಸ್‌, ಮಾಡೆಲಿಂಗ್‌, ಫ್ಯಾಷನ್‌ ಶೋಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೆ. ಹಾಗಿದ್ದಾಲೇ ‘ಜಂಗ್ಲಿ’ ಆಫರ್‌ ಬಂತು. ಮೊದಲ ಬಾರಿಗೆ ಒಳ್ಳೆಯ ಆಫರ್‌ ಅದು. ಅದರಿಂದಲೇ ನನಗೆ ‘ರಾಬರ್ಟ್‌’ ಅವಕಾಶ ಸಿಕ್ಕಿದ್ದು.

ನಿಮ್ಮ ಹಿನ್ನೆಲೆ ಏನು?

ನಮ್ಮದು ಶಿವಮೊಗ್ಗದ ಭದ್ರಾವತಿ. ನಮ್ಮ ಅಪ್ಪ, ಅಮ್ಮ ಎಲ್ಲರೂ ಈಗಲೂ ಅಲ್ಲಿಯೇ ಇದ್ದಾರೆ. ನನ್ನ ಪ್ರಾಥಮಿಕ ಶಿಕ್ಷಣವೆಲ್ಲಾ ಆಗಿದ್ದು ಅಲ್ಲಿಯೇ. ಆಮೇಲೆ ಬೆಂಗಳೂರಿನ ವಿಆರ್‌ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಮಾಡಿದೆ. ಈಗ ಸದ್ಯ ಮುಂಬೈನಲ್ಲಿಯೇ ವಾಸ.

ಮುಂದಿನ ಚಿತ್ರಗಳ ಬಗ್ಗೆ ನಿರೀಕ್ಷೆ ಏನಾದರೂ ಇದೆಯೇ?

ಖಂಡಿತ, ಒಳ್ಳೆಯ ಓಪನಿಂಗ್‌ ಸಿಕ್ಕಿದೆ. ಹಾಗಾಗಿ ಮುಂದೆಯೂ ಒಳ್ಳೆಯ ಚಿತ್ರ, ತಂಡ, ಪಾತ್ರಗಳ ನಿರೀಕ್ಷೆಯಲ್ಲಿ ಇದ್ದೇನೆ. ಸದ್ಯಕ್ಕೆ ‘ರಾಬರ್ಟ್‌’ ಮುಗಿಯುವವರೆಗೂ ಯಾವ ಚಿತ್ರವನ್ನೂ ಒಪ್ಪಿಕೊಳ್ಳಬಾರದು ಎನ್ನುವ ನಿರ್ಧಾರ ಮಾಡಿದ್ದೇನೆ. ಅಲ್ಲದೇ ಮುಂದೆ ಕನ್ನಡದಲ್ಲಿ ಸಿಗುವ ಯಾವುದೇ ಒಳ್ಳೆಯ ಅವಕಾಶವನ್ನು ನಾನು ಮಿಸ್‌ ಮಾಡಿಕೊಳ್ಳುವುದಿಲ್ಲ. ನನ್ನ ಪ್ರಕಾರ ಸಿನಿಮಾಗೆ ಸ್ಟೋರಿ ಇಸ್‌ ದಿ ಕಿಂಗ್‌. ಅದರೊಂದಿಗೆ ಒಳ್ಳೆಯ ತಂಡ ಸಿಕ್ಕಿದರೆ ಅದರ ಮಜವಾವೇ ಬೇರೆ. ಆ ರೀತಿಯ ಟೀಂ ‘ರಾಬರ್ಟ್‌’ ಚಿತ್ರದ್ದು. ನನಗೆ ಈ ಚಿತ್ರ ಒಳ್ಳೆಯ ಬೇಸ್‌ ಹಾಕಿಕೊಡಲಿದೆ ಎನ್ನುವ ನಂಬಿಕೆ ನನಗಿದೆ.

- ಕೆಂಡಪ್ರದಿ