ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದಲ್ಲ ಒಂದು ಡಿಫ್ರೆಂಟ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಂತೆ ದರ್ಶನ್ ತಮ್ಮ ಮುಂಬರುವ ಚಿತ್ರದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದಲ್ಲ ಒಂದು ಡಿಫ್ರೆಂಟ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಂತೆ ದರ್ಶನ್ ತಮ್ಮ ಮುಂಬರುವ ಚಿತ್ರದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ನಾಗಿ ಕಾಣಿಸಿಕೊಂಡ ಮೇಲೆ ಈಗ ಕೋಟೆಯ ನಾಡಿನ ವೀರನಾಗಿ ತೆರೆ ಮೇಲೆ ಘರ್ಜಿಸುವುದಕ್ಕೆ ಹೊರಟಿದ್ದಾರಚಿತ್ರದುರ್ಗದ ಪಾಳೆಗಾರ ಗಂಡುಗಲಿ ಮದಕರಿ ನಾಯಕನಾಗಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. 

Add Asianetnews Kannada as a Preferred SourcegooglePreferred

ಸಾಹಿತಿ ಬಿಎಲ್ ವೇಣು ಅವರೇ ಬರೆದಿರುವ ‘ಗಂಡುಗಲಿ ಮದಕರಿ ನಾಯಕ’ ಕಾದಂಬರಿಯನ್ನು ಆಧರಿಸಿದ ಚಿತ್ರವಿದು.ಹೀಗಾಗಿ ಚಿತ್ರಕ್ಕೆ ‘ಗಂಡುಗಲಿ ಮದಕರಿ ನಾಯಕ’ ಎಂದೇ ಹೆಸರಿಡಲಾಗುತ್ತಿದೆ. 

ವಿಶೇಷ ಅಂದರೆ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ರಾಜೇಂದ್ರಸಿಂಗ್ ಬಾಬು. ನಿರ್ಮಾಣ ಮಾಡುತ್ತಿರುವುದು ರಾಕ್‌ಲೈನ್ ವೆಂಕಟೇಶ್. ಈಗಾಗಲೇ ಕತೆ ರೆಡಿಯಾಗಿದ್ದು, ಇದಕ್ಕೆ ಚಿತ್ರಕತೆ ಹಾಗೂ ಸಂಭಾಷಣೆ ಬರೆಯುವುದರಲ್ಲಿ ಸಾಹಿತಿ ಬಿ ಎಲ್ ವೇಣು ಅವರು ಬ್ಯುಸಿಯಾಗಿದ್ದಾರೆ.

ಒಂದು ಹಂತದ ಚಿತ್ರಕತೆ ಹಾಗೂ ಡೈಲಾಗ್ ಕೆಲಸ ಮುಗಿಸಿದ್ದು, ನಿರ್ದೇಶಕ ಹಾಗೂ ನಿರ್ಮಾಪಕರು ರೀಡಿಂಗ್ ಕೂಡ ತೆಗೆದುಕೊಂಡಿದ್ದಾರೆ. ಕೆಲವು ತಿದ್ದುಪಡಿಗಳು ನಡೆಯುತ್ತಿವೆ. ಅಂದುಕೊಂಡಂತೆ ಆದರೆ, ಮುಂದಿನ ವರ್ಷ ದರ್ಶನ್ ‘ಗಂಡುಗಲಿ ಮದಕರಿ ನಾಯಕ’ನಾಗಲಿದ್ದಾರೆ. 

ಅಂದರೆ ಈ ಸಿನಿಮಾ ಸೆಟ್ಟೇರುವುದು ಮುಂದಿನ ವರ್ಷ. ಈಗಾಗಲೇ ‘ಒಡೆಯ’ ಚಿತ್ರ ಮಾಡುತ್ತಿದ್ದು, ಇದರ ನಂತರ ಉಮಾಪತಿ ನಿರ್ಮಾಣದ ಚಿತ್ರಕ್ಕೆ ಬರಲಿದ್ದಾರೆ. ಈ ಎರಡು ಸಿನಿಮಾ ಮುಗಿಸುವ ಹೊತ್ತಿಗೆ ದರ್ಶನ್ ಮುಂದೆ ಮದಕರಿ ನಾಯಕ ಬಂದು ನಿಲ್ಲಲಿದ್ದಾರೆ.

ಇತ್ತ ರಾಕ್‌ಲೈನ್ ವೆಂಕಟೇಶ್ ಕೂಡ ಅನೂಪ್ ಭಂಡಾರಿ ಹಾಗೂ ರಾಧಿಕಾ ಪಂಡಿತ್ ಕಾಂಬಿನೇಷನ್‌ನಲ್ಲಿ ‘ಆದಿಲಕ್ಷ್ಮೀ ಪುರಾಣ’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದು ಮುಗಿಸಿದ ಮೇಲೆಯೇ ಬೇರೆಯ ಚಿತ್ರದತ್ತ ಮುಖ ಮಾಡಲಿದ್ದಾರೆ.

ಅದ್ದೂರಿಯಾಗಿ ಬಹು ಕೋಟಿ ವೆಚ್ಚದಲ್ಲಿ ಸೆಟ್ಟೇರಲಿರುವ ಈ ಚಿತ್ರ ಆಗುವುದಕ್ಕೆ ಮೂಲ ಕಾರಣ ಹಿರಿಯ ನಟ ದೊಡ್ಡಣ್ಣ ಅವರಂತೆ. ಅವರೇ ಇಂಥದ್ದೊಂದು ಕತೆಯನ್ನು ಸಿನಿಮಾ ಮಾಡಿಸುವುದಕ್ಕೆ
ರಾಕ್‌ಲೈನ್ ವೆಂಕಟೇಶ್ ಅವರಿಗೆ ಸಲಹೆ ನೀಡಿದ್ದು, ಈ ಚಿತ್ರದ ನಿರ್ದೇಶನದ ಸಾರಥ್ಯವನ್ನು ರಾಜೇಂದ್ರಸಿಂಗ್ ಬಾಬು ಅವರ ಹೆಗಲಿಗೆ ವಹಿಸಿದ್ದಾರೆ.