Asianet Suvarna News Asianet Suvarna News

ದರ್ಶನ್‌- ಸುದೀಪ್‌ ಸಿನಿಮಾ ಒಂದೇ ದಿನ ರಿಲೀಸ್‌!

ದರ್ಶನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕುರುಕ್ಷೇತ್ರ’ದ ರಿಲೀಸ್‌ಗೆ ತೆರೆಮರೆಯಲ್ಲಿ ಸಿದ್ಧತೆ ನಡೆದಿದೆ. ಮಂಡ್ಯ ಕುರುಕ್ಷೇತ್ರದ ನಂತರ ಸ್ಯಾಂಡಲ್‌ವುಡ್‌ನಲ್ಲಿ ‘ಮುನಿರತ್ನ ಕುರುಕ್ಷೇತ್ರ’ ಕೊನೆಗೂ ಸದ್ದು ಮಾಡಲು ಸಜ್ಜಾಗಿದೆ. ನಿರ್ಮಾಪಕ ಮುನಿರತ್ನ ನೀಡಿರುವ ಮಾಹಿತಿ ಪ್ರಕಾರವೇ ಈ ಚಿತ್ರ ವರಮಹಾಲಕ್ಷ್ಮಿ ಹಬ್ಬಕ್ಕೆ ಅಂದ್ರೆ ಆಗಸ್ಟ್‌ ತಿಂಗಳ ಎರಡನೇ ವಾರ ತೆರೆಗೆ ಬರುವುದು ಗ್ಯಾರಂಟಿ ಆಗಿದೆ.

Darshan Kurukshetra Sudeep Pailwaan movies to be released on Varalakshmi festival
Author
Bangalore, First Published May 4, 2019, 10:11 AM IST

ಕನ್ನಡ ಮಟ್ಟಿಗೆ ದಾಖಲೆ ಎನ್ನುವ ಹಾಗೆ 9.5 ಕೋಟಿಗೆ ಡಬ್ಬಿಂಗ್‌ ಹಕ್ಕು ಸೇಲ್‌ ಆಗಿರುವ ಮಾಹಿತಿ ಇದೆ. ಇಂಟರೆಸ್ಟಿಂಗ್‌ ಅಂದ್ರೆ ಇದೇ ದಿನ ಸುದೀಪ್‌ ಅಭಿನಯದ ಪೈಲ್ವಾನ್‌ ಕೂಡ ರಿಲೀಸ್‌ ಆಗಲಿದೆ. ಕುರುಕ್ಷೇತ್ರ ಐದು ಭಾಷೆಯಲ್ಲಿ ತಯಾರಾದರೆ, ಪೈಲ್ವಾನ್‌ ಎಂಟು ಭಾಷೆಯಲ್ಲಿ ತಯಾರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ನಾಲ್ಕು ಭಾಷೆಗಳಲ್ಲಿ ಕುರುಕ್ಷೇತ್ರ ಪೋಸ್ಟರ್ ರಿಲೀಸ್

ವರಮಹಾಲಕ್ಷ್ಮಿ ಹಬ್ಬಕ್ಕೆ ಫಿಕ್ಸ್‌!

ಈಗಾಗಲೇ ಚಿತ್ರೀಕರಣದ ಜತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಮುಗಿಸಿಕೊಂಡು ರಿಲೀಸ್‌ಗೆ ರೆಡಿ ಆಗಿರುವ ‘ಮುನಿರತ್ನ ಕುರುಕ್ಷೇತ್ರ’ ಚಿತ್ರವು ಎಲ್ಲವೂ ಅಂದುಕೊಂಡಂತಾಗಿದ್ದರೆ ಇಷ್ಟರಲ್ಲೇ ತೆರೆ ಕಾಣಬೇಕಿತ್ತು. ಈಗ ಕಾಲ ಕೂಡಿ ಬಂದಿದೆ. ಆಗಸ್ಟ್‌ ತಿಂಗಳಲ್ಲೇ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರವನ್ನು ರಿಲೀಸ್‌ ಮಾಡಲಾಗುವುದು ಎಂದು ಮುನಿರತ್ನ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ವಿಶೇಷ ಅಂದ್ರೆ, ‘ಕೆಜಿಎಫ್‌’ ಚಿತ್ರದ ಮಾದರಿಯಲ್ಲೇ ‘ಕುರುಕ್ಷೇತ್ರ’ವೂ ಬಹುಭಾಷೆಯಲ್ಲಿ ತೆರೆಗೆ ಬರುತ್ತಿದೆ.

ಪಂಚ ಭಾಷೆಯಲ್ಲಿ ಕುರುಕ್ಷೇತ್ರ!

‘ಮುನಿರತ್ನ ಕುರುಕ್ಷೇತ್ರ’ ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಖುದ್ದು ಆ ಮಾಹಿತಿಯನ್ನು ಮುನಿರತ್ನ ಅವರೇ ರಿವೀಲ್‌ ಮಾಡಿದ್ದಾರೆ. ‘ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇರುವುದರಿಂದ ಬಹುಭಾಷೆಗಳಲ್ಲಿ ಅದ್ಧೂರಿಯಾಗಿಯೇ ಬಿಡುಗಡೆ ಮಾಡುವ ಪ್ಲ್ಯಾನ್‌ ಇದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಚಿತ್ರ ತೆರೆಗೆ ಬರುತ್ತಿದೆ. ಅಷ್ಟುಭಾಷೆಯಲ್ಲೂ 3ಡಿ ರೂಪದಲ್ಲೇ ಚಿತ್ರ ರಿಲೀಸ್‌ ಆಗಲಿದೆ. ಈಗಾಗಲೇ ನಾಲ್ಕು ಭಾಷೆಯಲ್ಲಿ ಸಿನಿಮಾ ಸಿದ್ಧವಾಗಿದೆ. ಕನ್ನಡದಲ್ಲಿ ಸೆನ್ಸಾರ್‌ ಕೂಡ ಆಗಿದೆ. ಉಳಿದ ಮೂರು ಭಾಷೆಗಳಿಗೆ ಮುಂದಿನ ವಾರ ಸೆನ್ಸಾರ್‌ಗೆ ಹೋಗುತ್ತಿದೆ. ಜತೆಗೆ ಹಿಂದಿ ವರ್ಷನ್‌ ಹದಿನೈದು ಮುಗಿಯಲಿದೆ. ಅಮೇರಿಕ ಒಂದರಲ್ಲೇ ಐದು ಭಾಷೆಯಲ್ಲೂ ಸಿನಿಮಾ ಬಿಡುಗಡೆ ಮಾಡುವ ಪ್ಲ್ಯಾನ್‌ ಇದೆ ಎನ್ನುವುದು ಮುನಿರತ್ನ ಮಾತು.

ಬಹುಭಾಷೆಗಳಲ್ಲಿ ಅಬ್ಬರಿಸಲಿದ್ದಾನೆ ’ಪೈಲ್ವಾನ್’!

ಹಿಂದಿ ಡಬ್ಬಿಂಗ್‌ ಹಕ್ಕು 9.5 ಕೋಟಿಗೆ ಸೇಲ…!

ನಿರ್ಮಾಪಕ ಮುನಿರತ್ನ ಅವರೇ ಹೇಳಿರುವ ಪ್ರಕಾರ, ಈ ಚಿತ್ರದ ಹಿಂದಿ ಡಬ್ಬಿಂಗ್‌ ಹಕ್ಕು 9.5 ಕೋಟಿಗೆ ಸೇಲ… ಆಗಿದೆಯಂತೆ. ಕನ್ನಡದ ಮಟ್ಟಿಗೆ ಇದು ದಾಖಲೆಯೂ ಹೌದು. ವಿಶೇಷ ಅಂದ್ರೆ, ಇದು ಕೇವಲ ಟಿವಿ ರೈಟ್ಸ್‌ ಮಾತ್ರ. ಥಿಯೇಟರ್‌ಗೆ ಇನ್ನು ಸೇಲ್‌ ಆಗಿಲ್ಲ. ಹಾಗೆಯೇ ಓವರ್‌ಸೀಸ್‌ಗೆ ಇನ್ನು ಯಾವ ಭಾಷೆಯೂ ರೈಟ್ಸ್‌ ಸೇಲ್‌ ಆಗಿಲ್ಲ. ಇದು ಕೂಡ ಮುನಿರತ್ನ ಅವರ ಮಾಹಿತಿ. ಒಟ್ಟಿನಲ್ಲೀಗ ಕೊನೆಗೂ ತೆರೆಗೆ ಸಜ್ಜಾಗಿರುವ ಕುರುಕ್ಷೇತ್ರ ಈಗ ದೊಡ್ಡ ಹವಾ ಎಬ್ಬಿಸಲು ರೆಡಿ ಆಗಿದೆ. ಅಗಸ್ಟ್‌ ಹೊತ್ತಿಗೆ ತೆರೆಗೆ ಬರುವುದು ಗ್ಯಾರಂಟಿ ಆಗಿದ್ದರೂ, ಇನ್ನು ದಿನಾಂಕ ನಿಗದಿ ಆಗಿಲ್ಲ. 3 ಡಿ ವರ್ಷನ್‌ ಮುಗಿದಾಗಲೇ ಡೇಟ್‌ ಫಿಕ್ಸ್‌ ಗ್ಯಾರಂಟಿ ಅಂತೆ.

Follow Us:
Download App:
  • android
  • ios