ದರ್ಶನ್ ಕುರುಕ್ಷೇತ್ರದ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್

First Published 9, May 2018, 9:29 PM IST
Darshan Kuruksetra release Date Postpone
Highlights

ಕುರುಕ್ಷೇತ್ರ ಚಿತ್ರಕ್ಕೆ ದುಡ್ಡು ಹಾಕಿರೋದು ಶಾಸಕ ಮುನಿರತ್ನ. ಚುನಾವಣಾ ಹೊತ್ತಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಓಪನ್ ಸಿಕ್ರೇಟ್. ಆದರೆ ಚಿತ್ರತಂಡ ಹೇಳುವುದು ಬೇರೆ. ಸಿನಿಮಾ ಸಿದ್ಧವಾಗಿದೆ. ಚುನಾವಣೆ ಪ್ರಕಟಣೆಯಾದ ಕಾರಣ ಎಲ್ಲವು ಮುಂದಕ್ಕೆ ಹೋಗಿದೆ ಎನ್ನುತ್ತಿದೆ.


ಕುರುಕ್ಷೇತ್ರ ಕನ್ನಡ ನಾಡಲ್ಲಿಯೇ ಹೊಸ ಅಲೆ ಎಬ್ಬಿಸಿತ್ತಿರುವ ಚಿತ್ರ. ದರ್ಶನ್ ಅಭಿಮಾನಿಗಳಲ್ಲೂ ಈ ಚಿತ್ರದ ಬಗ್ಗೆ ದಿನವೂ ಕಾತರ ಹೆಚ್ಚುತ್ತಿದೆ. ಅಷ್ಟೊಂದು ನಿರೀಕ್ಷೆಯ ಕುರುಕ್ಷೇತ್ರ ಬಿಡುಗಡೆ ಆಗ್ತಿಲ್ಲ ಅನ್ನೊ ಬೇಸರ ಭಿಮಾನಿಗಳಲ್ಲಿ ಇದ್ದೇ ಇದೆ. ಆದರೆ,ಸಿನಿಮಾ ತೆರೆಗೆ ಬರದಿರುವುದಕ್ಕೆ ಕಾರಣ ಬೇರೆ ಏನೋ ಅಲ್ಲ ಅದು ವಿಧಾನಸಭಾ ಚುನಾವಣೆ.
ಚಿತ್ರಕ್ಕೆ ದುಡ್ಡು ಹಾಕಿರೋದು ಶಾಸಕ ಮುನಿರತ್ನ. ಚುನಾವಣಾ ಹೊತ್ತಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಓಪನ್ ಸಿಕ್ರೇಟ್. ಆದರೆ ಚಿತ್ರತಂಡ ಹೇಳುವುದು ಬೇರೆ. ಸಿನಿಮಾ ಸಿದ್ಧವಾಗಿದೆ. ಚುನಾವಣೆ ಪ್ರಕಟಣೆಯಾದ ಕಾರಣ ಎಲ್ಲವೂ ಮುಂದಕ್ಕೆ ಹೋಗಿದೆ ಎನ್ನುತ್ತಿದೆ. ನಿರ್ಮಾಪಕ ಮುನಿರತ್ನ ಅವರು ಚುನಾವಣಾ ಕೆಲಸದಲ್ಲಿ ತೊಡಗಿಸಿಕೊಂಡರು. ಅದಕ್ಕಾಗಿ ಬಿಡುಗಡೆ ನಿಧಾನ ಅಂತಿದೆ ಸಿನಿಮಾ ತಂಡ. ಚುನಾವಣೆ ಮುಗಿದ ನಂತರ ಕೆಲವೇ ದಿನಗಳಲ್ಲಿ ತೆರೆಕಾಣಲಿದೆಯಂತೆ ಕುರುಕ್ಷೇತ್ರ. 

loader