ಪವಿತ್ರ ಗೌಡ ಛತ್ರಿಗಳು ಸಾರ್ ಛತ್ರಿಗಳು ಹಾಗೂ ಭತ್ತಾಸ್ ಚಿತ್ರಗಳಲ್ಲಿ ನಟಿಸಿದ್ದಾರೆ

ಸ್ಯಾಂಡಲ್'ವುಡ್ ನಟಿ ಹಾಗೂ ಮಾಡಲ್ ಪವಿತ್ರ ಗೌಡ ಅವರು ತಮ್ಮ ಫೇಸ್'ಬುಕ್ ಹಾಗೂ ಟ್ವಿಟರ್ ಅಕೌಂಟ್'ನಲ್ಲಿ ದರ್ಶನ್ ಜೊತೆಯಿರುವ ಫೋಟೊವನ್ನು ಕವರ್ ಪೇಜ್'ನಲ್ಲಿ ಹಾಕಿಕೊಂಡಿದ್ದಾರೆ.

ಈಗ್ಯಾಕೆ ಈಕೆ ನಟ ದರ್ಶನ್ ಜೊತೆಯಿರುವ ಫೋಟೋಗಳನ್ನು ಅಪ್'ಲೋಡ್ ಮಾಡಿದ್ದಾಳೆ ಅನ್ನುವುದರ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಫೋಟೊವನ್ನು ಡೆಲಿಟ್ ಮಾಡುವಂತೆ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಪವಿತ್ರ ಗೌಡ ಛತ್ರಿಗಳು ಸಾರ್ ಛತ್ರಿಗಳು ಹಾಗೂ ಭತ್ತಾಸ್ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಇವರಿಬ್ಬರ ನಡುವೆ ಅಫೇರ್ ಇರುವ ಬಗ್ಗೆ ಸುದ್ದಿಯಾಗಿತ್ತು. ಆದರೆ ಇದಕ್ಕೆ ಸ್ಪಷ್ಟಿಕರಣ ನೀಡಿದ್ದ ಪವಿತ್ರ ನಾವಿಬ್ಬರು ಗೆಳಯರಷ್ಟೆ ಮತ್ತೇನಿಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ತಮ್ಮ ಟ್ವಿಟರ್ ಅಕೌಂಟ್'ನಲ್ಲಿ ದರ್ಶನ್ ತೋಟದಲ್ಲಿ ಹಾಲು ಕರೆಯುತ್ತಿರುವ ಫೋಟೊವನ್ನು ಕೂಡ ಪೋಸ್ಟ್ ಮಾಡಿಕೊಂಡಿದ್ದಾರೆ. ದರ್ಶನ್ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪವಿತ್ರ ಗೌಡ ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ.