ಈಗ ಅಭಿನಯಿಸುತ್ತಿರುವ ಕನ್ನಡ ಕಲಾವಿದನಿಗೂ ಸಿನಿಮಾದ ಪ್ರಮುಖ ಪಾತ್ರದಾರಿಯಾಗಿರುವ ಕಟ್ಟಪ್ಪರಿಗೂ ಒಂದು ಸಾಮ್ಯತೆಯಿದೆ.

ಬೆಂಗಳೂರು(ಏ.25): ರಾಜಮೌಳಿ ನಿರ್ದೇಶನದ ಬಾಹುಬಲಿ -1 ರ ಒಂದು ಸಣ್ಣ ಪಾತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್ ಅಭಿನಯಿಸಿದ್ದರು. ಈಗ ಏ.28ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿರುವ ಅದರ ಮುಂದುವರೆದ ಆವೃತ್ತಿಯಲ್ಲಿ ಮತ್ತೊಬ್ಬ ಕನ್ನಡದ ನಟರೊಬ್ಬರು ಅಭಿನಯಿಸುತ್ತಿದ್ದಾರೆ.

ಈಗ ಅಭಿನಯಿಸುತ್ತಿರುವ ಕನ್ನಡ ಕಲಾವಿದನಿಗೂ ಸಿನಿಮಾದ ಪ್ರಮುಖ ಪಾತ್ರದಾರಿಯಾಗಿರುವ ಕಟ್ಟಪ್ಪರಿಗೂ ಒಂದು ಸಾಮ್ಯತೆಯಿದೆ. ಕಟ್ಟಪ್ಪನ ನಿಜ ನಾಮದೇಯ ಸತ್ಯರಾಜ್ ಆದರೆ ಕನ್ನಡಿಗನ ನಿಜವಾದ ಹೆಸರು ಡ್ಯಾನಿ ಕುಟ್ಟಪ್ಪ.

ಈ ಕಲಾವಿದನನ್ನು ನೀವು ಈಗಾಗಲೇ ಡೆಡ್ಲಿ-2, ಮರ್ಯಾದೆ ರಾಮಣ್ಣ,ಶಿವಲಿಂಗ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನೋಡಿರುತ್ತೀರಿ. ವಿಲನ್ ಪಾತ್ರದಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಇವರಿಗೆ ಬಾಹುಬಲಿ-2 ಐವತ್ತನೆ ಸಿನಿಮಾವಾಗಿದೆ. ಇಲ್ಲೂ ಕೂಡ ಇವರು ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.