ಕೊನೆಗೂ ತನ್ನ ಆರಾಧ್ಯ ದೈವನನ್ನು ಭೇಟಿಯಾದ ಡ್ಯಾನ್ಸಿಂಗ್ ಅಂಕಲ್ನಟ ಗೋವಿಂದ ಅವಾರನ್ನು ಭೇಟಿಯಾದ ಸಂಜೀವ್ ಶ್ರೀವಾತ್ಸವ್ಮಾಧುರಿ ದಿಕ್ಷಿತ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಭೇಟಿಡ್ಯಾನ್ಸ್ ಸ್ಟೆಪ್ ಹಾಕಿ ಅಭಿಮಾನಿಗಳನ್ನು ರಂಜಿಸಿದ ಜೋಡಿ

ಮುಂಬೈ(ಜೂ.14): ತಮ್ಮ ಡ್ಯಾನ್ಸ್ ಸ್ಟೆಪ್ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿದ್ದ 'ಡ್ಯಾನ್ಸಿಂಗ್ ಅಂಕಲ್' ಇದೀಗ ತಮ್ಮ ಆರಾಧ್ಯ ನಟ ಗೋವಿಂದ ಅವರನ್ನು ಕೊನೆಗೂ ಭೇಟಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಲಿವುಡ್ ನಟಿ ಮಾಧುರಿ ದಿಕ್ಷಿತ್ ನಡೆಸಿಕೊಡುವ ಡ್ಯಾನ್ಸ್ ದಿವಾನೆ ರಿಯಾಲಿಟಿ ಶೋ ಕಾರ್ಯಕ್ರಮದ ವೇದಿಕೆ ಮೇಲೆ ಸಂಜೀವ್ ಶ್ರೀವಾತ್ಸವ್ ಹಾಗೂ ನಟ ಗೋವಿಂದ್ ಒಂದೇ ಹಾಡಿಗೆ ಹೆಜ್ಜೆ ಹಾಕಿದರು. ಇಬ್ಬರು ವೇದಿಕೆ ಮೇಲೆ ಕುಣಿದು ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ.

Scroll to load tweet…

ಸಂಬಂಧಿಕರೊಬ್ಬರ ಮದುವೆಯಲ್ಲಿ ಸಂಜೀವ್ ಶ್ರೀವಾತ್ಸವ್, 1987ರಲ್ಲಿ ಬಾಲಿವುಡ್ ನಟ ಗೋವಿಂದಾ ಅಭಿನಯದ `ಖುದ್ಗರ್ಜ್' ಚಿತ್ರದ ಆಪ್ ಕೆ ಆ ಜಾನೆ ಸೆ' ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಡ್ಯಾನ್ಸಿಂಗ್ ಅಂಕಲ್ ಎಂಬ ಅಡಿಬರಹದೊಂದಿಗೆ ಅಪ್ ಲೋಡ್ ಮಾಡಲಾಗಿತ್ತು.

ಡ್ಯಾನ್ಸಿಂಗ್ ಅಂಕಲ್ ಎಂದೇ ಖ್ಯಾತರಾಗಿರುವ 40ರ ಹರೆಯದ ಸಂಜೀವ್ ಶ್ರೀವಾತ್ಸವ್, ಭೋಪಾಲ್ ನ ಬಾಬಾ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಪ್ರೋಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Scroll to load tweet…