ಬೆಂಗಳೂರು(ಅ.4): ದನಕಾಯೋನು ಸಿನಿಮಾ ರಿಲೀಸ್'ಗೆ ರೆಡಿಯಾಗ್ತಿದ್ದಂತೆ ಚಿತ್ರತಂಡ ಹೊಸ ನಾಟಕ ಶುರುಮಾಡಿದೆ. ಯೋಗರಾಜ್​ ಭಟ್ರು,ವಿಜಿ ಸೇರ್ಕೊಂಡು ದನಕಾಯೋರ ಕುರುಕ್ಷೇತ್ರ ನಾಟಕ ಆರಂಭಿಸಿದ್ದಾರೆ. ದನಕಾಯೋರ ಕುರುಕ್ಷೇತ್ರ ಅನ್ನೋ ನಾಟಕವನ್ನು ಚಿತ್ರತಂಡ ಮಾಡಲಿದೆ. ಅಂದ್ಹಾಗೇ ಈ ನಾಟಕ ನಡೀತಿರೋದು ಚಿತ್ರದ ಪ್ರಮೋಷನ್​ಗೆ. ಇಂದು ನಾಟಕದ ರಿಹರ್ಸಲ್ ಮಾಡಲಾಯಿತು. ಯೋಗರಾಜ್ ಭಟ್ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಟ ದುನಿಯಾ ವಿಜಯ್ ಕೃಷ್ಣನಾಗಿ ಕಾಣಿಸಿಕೊಂಡರು. ನಟಿ ಪ್ರಿಯಾಮಣಿ ರುಕ್ಮಿಣಿ ಪಾತ್ರದಲ್ಲಿ ಅಭಿನಯಿಸಲು ಸಿದ್ಧರಾಗಿದ್ದಾರೆ.