ಬಿಗ್‌ಬಾಸ್ ಮನೆಯೊಳಗೆ ಶ್ರೀಶಾಂತ್ ರಗಳೆ | ಪ್ರೆಸ್ ಕಾನ್ಫರೆನ್ಸ್ ಮಾಡಲು ನಿರಾಕರಣೆ | ಉಳಿದ ಸ್ಪರ್ಧಾಳುಗಳ ಮೇಲೆ ರೇಗಾಟ | ಬೇರೆ ಸ್ಪರ್ಧಿಗಳಿಗೂ ಕಿರಿಕಿರಿ ಮಾಡಿದ ಶ್ರೀಶಾಂತ್ 

ಬೆಂಗಳೂರು (ಸೆ. 19): ಕ್ರಿಕೆಟಿಗ ಶ್ರೀಶಾಂತ್ ಕ್ರಿಕೆಟ್ ಗಿಂತ ಹೆಚ್ಚಾಗಿ ವಿವಾದಗಳಿಂದಲೇ ಫೇಮಸ್ ಆದವರು. ಆಗಾಗ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. 

ಹಿಂದಿಯ ಬಿಗ್ ಬಾಸ್ ಸೀಸನ್ 12 ನಲ್ಲಿ ಶ್ರೀಶಾಂತ್ ಸ್ಪರ್ಧಿಯಾಗಿದ್ದಾರೆ. ಶೋ ವೇಳೆ ಬಿಬಿ ಪ್ರೆಸ್ ಕಾನ್ಫರೆನ್ಸ್ ಮಾಡುವ ಟಾಸ್ಕನ್ನು ಶ್ರೀಶಾಂತ್ ಗೆ ಕೊಡಲಾಗಿತ್ತು. ಆದರೆ ಅದನ್ನು ಮಾಡಲು ಶ್ರೀಶಾಂತ್ ನಿರಾಕರಿಸಿದರು. ಆಗ ಆ ಟಾಸ್ಕ್ ಮಾಡಲು ಪ್ರತಿಸ್ಪರ್ಧಿಯೊಬ್ಬರು ಮುಂದೆ ಬಂದಾಗ ತಾಳ್ಮೆ ಕಳೆದುಕೊಂಡ ಶ್ರೀಶಾಂತ್ ಅವರ ಮೇಲೆ ರೇಗಾಡಿದರು. ಬಿಗ್ ಬಾಸ್ ಬಾಗಿಲನ್ನು ಓಪನ್ ಮಾಡುವಂತೆ ಕಿರುಚಾಡಿದರು. ಮೈಕ್ ಹಾಕಿಕೊಳ್ಳಲು ನಿರಾಕರಿಸಿದರು. ಇವರ ವರ್ತನೆ ಬಿಗ್ ಬಾಸ್ ಮನೆಯ ಬೇರೆ ಸ್ಪರ್ಧಿಗಳಿಗೂ ಇರುಸು ಮುರುಸು ಉಂಟು ಮಾಡಿತು. 

Scroll to load tweet…

ಬಿಗ್ ಬಾಸ್ ಮನೆಯೊಳಗೆ ಹೋದ ಎರಡೇ ದಿನಕ್ಕೆ ವಿವಾದ ಮಾಡಿಕೊಂಡಿದ್ದಾರೆ. ಇವರ ವರ್ತನೆ ಹೀಗೆ ಮುಂದುವರೆದರೆ ಬೇಗ ಮನೆಯಿಂದ ಹೊರ ಬರುತ್ತಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಮನೆಯೊಳಕ್ಕೆ ಹೋಗುವ ಮುನ್ನ ನಾನು ಅಲ್ಲಿಂದ ಬೇಗ ಹೊರ ಬರುವುದಿಲ್ಲ. ನನಗೆ ಭರವಸೆಯಿದೆ, ನಾನು ಗ್ರಾಂಡ್ ಫಿನಾಲೆಯಿಂದಲೇ ಹೊರ ಬರುವುದು ಎಂದು ಶ್ರೀಶಾಂತ್ ಹೇಳಿದ್ದಾರೆ. ಮುಂದೇನಾಗುತ್ತೆ ಕಾದು ನೋಡಬೇಕಿದೆ.