ಕನ್ನಡದ ಮತ್ತೊಂದು ಚಿತ್ರ ಬಿಡುಗಡೆಗೆ ಮುನ್ನವೇ ವಿವಾದ ಸೃಷ್ಟಿಸಿದೆ. ಇಬ್ಬರು ನಿರ್ಮಾಪಕರ ಒಳ ಜಗಳದಿಂದಾಗಿ ಬಹುನಿರೀಕ್ಷಿತ 'ರಾಜು ಕನ್ನಡ ಮೀಡಿಯಂ' ಚಿತ್ರ ಕೋರ್ಟ್ ಮೆಟ್ಟಿಲೇರಿದೆ.  ಫಸ್ಟ್ ರ್ಯಾಂಕ್  ರಾಜು ಗುರುನಂದನ್ ಅಭಿನಯದ 'ರಾಜು ಕನ್ನಡ ಮೀಡಿಯಂ' ಚಿತ್ರ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್​ನಿಂದ ತಡೆ ತಂದಿರೋದು ಬೇರೆ ಯಾರೂ ಅಲ್ಲ, ಸ್ವತಃ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಡಾ. ಎನ್​. ಲಕ್ಷ್ಮೀಪತಿ.

ಬೆಂಗಳೂರು (ನ.06): ಕನ್ನಡದ ಮತ್ತೊಂದು ಚಿತ್ರ ಬಿಡುಗಡೆಗೆ ಮುನ್ನವೇ ವಿವಾದ ಸೃಷ್ಟಿಸಿದೆ. ಇಬ್ಬರು ನಿರ್ಮಾಪಕರ ಒಳ ಜಗಳದಿಂದಾಗಿ ಬಹುನಿರೀಕ್ಷಿತ 'ರಾಜು ಕನ್ನಡ ಮೀಡಿಯಂ' ಚಿತ್ರ ಕೋರ್ಟ್ ಮೆಟ್ಟಿಲೇರಿದೆ. ಫಸ್ಟ್ ರ್ಯಾಂಕ್ ರಾಜು ಗುರುನಂದನ್ ಅಭಿನಯದ 'ರಾಜು ಕನ್ನಡ ಮೀಡಿಯಂ' ಚಿತ್ರ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್​ನಿಂದ ತಡೆ ತಂದಿರೋದು ಬೇರೆ ಯಾರೂ ಅಲ್ಲ, ಸ್ವತಃ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಡಾ. ಎನ್​. ಲಕ್ಷ್ಮೀಪತಿ.

Add Asianetnews Kannada as a Preferred SourcegooglePreferred

ತಮಗೆ ಮಾಹಿತಿ ನೀಡದೇ ನಿರ್ಮಾಪಕ ಸುರೇಶ್, ತಮ್ಮದೇ ಬ್ಯಾನರ್ ನಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಮುಂದಾಗಿದ್ದಾರೆ ಅನ್ನೋದು ಲಕ್ಷ್ಮೀಪತಿ ಆರೋಪ. ಸುರೇಶ್ ಫಿಲ್ಮಸ್ ಮೂಲಕ ರಾಜು ಕನ್ನಡ ಮೀಡಿಯಂ ಚಿತ್ರ ನಿರ್ಮಿಸಲು ಆರಂಭಿಸಿದ್ದು, ಸುರೇಶ್ ಕೇವಲ 40 ಪರ್ಸೆಂಟ್ ದುಡ್ಡು ಹಾಕಿದ್ದಾರೆ. ತಾವು 60 ಪರ್ಸೆಂಟ್ ದುಡ್ಡು ಹಾಕಿರೋದಾಗಿ ಲಕ್ಷ್ಮೀಪತಿ ಹೇಳಿದ್ದಾರೆ.