ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆಯಾದ ಬಾಲಿವುಡ್ ಲವ್ ಬರ್ಡ್ಸ್ ದೀಪಿಕಾ ರಣವೀರ್ ನಿನ್ನೆಯಷ್ಟೇ ಮುಂಬೈಗೆ ಮರಳಿದ್ದಾರೆ. ಆದರೀಗ ನವಜೋಡಿಯು ತಿಳಿಯದೇ ಮಾಡಿದ ತಪ್ಪಿನಿಂದಾಗಿ ಸಿಖ್ ಸಮುದಾಯದ ಕೋಪವ್ನನೆದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ. 

ಹೌದು ದೀಪಿಕಾ ಹಾಗೂ ರಣವೀರ್ ತಮ್ಮ ಮದುವೆಯಲ್ಲಿ ಪವಿತ್ರ ಗ್ರಂಥ 'ಗುರು ಗ್ರಂಥ ಸಾಹೇಬ್'ನ್ನು ಹೋಟೆಲ್ ಕೋಣೆಗೊಯ್ದಿದ್ದು, ಸದ್ಯ ಸಿಖ್ ಸಮುದಾಯವನ್ನು ಕೆರಳಿಸಿದೆ. ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಆನಂದ್ ಕಾರಜ್[ಸಿಖ್ ಸಂಪ್ರದಾಯದಂತೆ ಮದುವೆ] ಮಾಡಿಕೊಳ್ಳಲು ಈ ಜೋಡಿ ಗುರುದ್ವಾರಕ್ಕೆ ಹೋಗಬೇಕಿತ್ತು. ಆದರೆ ಈ ತಾರಾ ಜೋಡಿ ಹೀಗೆ ಮಾಡದೆ ’ಗುರು ಗ್ರಂಥ ಸಾಹೇಬ್‌’ ಪವಿತ್ರ ಗ್ರಂಥವನ್ನೇ ಹೊಟೇಲ್ ಕೋಣೆಗೆ ತರಿಸಿಕೊಂಡಿದೆ. ಇದರಿಂದ ಕುಪಿತಗೊಂಡ ಸಿಖ್ ಸಮುದಾಯವು ಈ ಕುರಿತಾಗಿ 'ಅಕಾಲ್ ತಖ್ತ್'ನಲ್ಲಿ ದೂರು ನೀಡುತ್ತೇವೆಂದಿದೆ.

ಇದನ್ನೂ ಓದಿ: ದೀಪ್- ವೀರ್ ಮದುವೆಗೆ ಮಾಡಿದ ಖರ್ಚೆಷ್ಟು ಗೊತ್ತಾ?

ದೀಪಿಕಾ ಹಾಗೂ ರಣ್ವೀರ್ ಅಭಿಮಾನಿಗಳು ತಮ್ಮ ನೆಚ್ಚಿನ ಜೋಡಿಯ ಮದುವೆಗಾಗಿ ಕಾತುರದಿಂದ ಕಾಯುತ್ತಿದ್ದರು ಹಾಗೂ ಕೊನೆಗೂ ಇಬ್ಬರೂ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ನವೆಂಬರ್ 14 ರಂದು ಇಬ್ಬರೂ ಕೊಂಕಣಿ ಸಂಪ್ರದಾಯದಂತೆ ಇಟಲಿಯಲ್ಲಿ ಮದುವೆಯಾಗಿದ್ದಾರೆ, ಹಾಗೂ ನವೆಂಬರ್ 15 ರಂದು ಸಿಂಧಿ ಸಂಪ್ರದಾಯದಂತೆ ಆನಂದ್ ಕಾರಜ್‌ನ ಎಲ್ಲಾ ಆಚರಣೆಗಳನ್ನು ಪೂರೈಸಿದ್ದಾರೆ.

ಇದನ್ನೂ ಓದಿ: ಗಂಡನೊಂದಿಗೆ ಮುಂಬೈಗೆ ಬಂದಿಳಿದ ಮಿಸಸ್ ದೀಪಿಕಾ ರಣವೀರ್ ಸಿಂಗ್!

ಸದ್ಯ ಈ ಆನಂದ್ ಕಾರಜ್ ಸಿಖ್ ಸಮುದಾಯವನ್ನು ಕೆರಳಿಸಿದ್ದು, ಖುಷಿಯಿಂದ ಇರಬೇಕಿದ್ದ ನವ ದಂಪತಿ ದೀಪಿಕಾ ಹಾಗೂ ರಣವೀರ್‌ನನ್ನು ಚಿಂತೆಗೀಡು ಮಾಡಿದೆ.